ಚೀನಾ ಗಡಿ ಕಾಯುವ ಯೋಧರಿಗೆ ಅಮೆರಿಕಾ ನಿರ್ಮಿತ ಸಿಗ್ ಸಾಯರ್ ರೈಫಲ್ಸ್ ಖರೀದಿ

ಚೀನಾ ಗಡಿ ಪ್ರದೇಶದಲ್ಲಿ ಸುಮಾರು 3 ಸಾವಿರದ 600 ಕೀ. ಮೀ. ದೂರದವರೆಗೂ ನಿಯೋಜಿಸಲ್ಪಟ್ಟ ಸೈನಿಕರ ಬಳಕೆಗಾಗಿ ಸಿಗ್ ಸಾಯರ್ ರೈಫಲ್ಸ್ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿಗಳು
ಭದ್ರತಾ ಸಿಬ್ಬಂದಿಗಳು

ನವದೆಹಲಿ: ಚೀನಾ  ಗಡಿ ಪ್ರದೇಶದಲ್ಲಿ  ಸುಮಾರು   3 ಸಾವಿರದ 600  ಕೀ. ಮೀ. ದೂರದವರೆಗೂ ನಿಯೋಜಿಸಲ್ಪಟ್ಟ ಸೈನಿಕರ ಬಳಕೆಗಾಗಿ ಸಿಗ್ ಸಾಯರ್ ರೈಫಲ್ಸ್  ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅಮೆರಿಕಾ ಸೇರಿದಂತೆ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಈ ರೈಫಲ್ಸ್ ಬಳಸುತ್ತಿದ್ದು, ವೇಗದ ಟ್ರ್ಯಾಕ್  ಖರೀದಿ ಪ್ರಕ್ರಿಯೆಯಲ್ಲಿ ಇವುಗಳನ್ನು ಖರೀದಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಾರದೊಳಗೆ  ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಒಪ್ಪಂದ ಅಂತಿಮಗೊಂಡ ದಿನಾಂಕದಿಂದ ಒಂದು ವರ್ಷದೊಳಗೆ ಅಮೆರಿಕಾದ ಕಂಪನಿ  ರೈಫಲ್ಸ್ ಗಳನ್ನು  ಪೂರೈಕೆ ಮಾಡಲಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್  ರೈಫಲ್ಸ್ ಬದಲಿಗೆ ಅಮೆರಿಕಾ ತಯಾರಿಸುವ ರೈಫಲ್ಸ್ ಗಳನ್ನು ಬಳಸಲಾಗುತ್ತದೆ ಎಂಬುದು ಸೇನಾ ಮೂಲಗಳಿಂದ ತಿಳಿದುಬಂದಿದೆ.

ಪಾಕಿಸ್ತಾನ- ಚೀನಾ ಗಡಿ ಭಾಗದಲ್ಲಿ ಭದ್ರತೆಗೆ ಬೆದರಿಕೆಯೊಡ್ಡುವ ಪ್ರಯತ್ನಗಳು ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಸೇನಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಮುಂದಾಗಿದೆ.

ಕಳೆದ ವರ್ಷ ಆಕ್ಟೋಬರ್ ತಿಂಗಳಲ್ಲಿ  ಸುಮಾರು 7 ಲಕ್ಷ ರೈಫಲ್ಸ್ ಗಳು, 44 ಸಾವಿರ ಲಘು ಮೇಷಿನ್ ಗನ್ ಗಳು ಹಾಗೂ ಸುಮಾರು 44, 600 ಕಾರ್ಬಿನ್ಸ್ ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಸೇನೆ ಆರಂಭಿಸಿತ್ತು.  18 ತಿಂಗಳ ಹಿಂದೆ ಇಶಾಪೊರ್  ರೈಫಲ್ಸ್ ಪ್ಯಾಕ್ಟರಿಯಿಂದ ತಯಾರಾಗುವ  ರೈಫಲ್ಸ್ ಗಳನ್ನು ಬಳಸಲು  ಸೇನೆ ನಿರಾಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com