
ಮಣಿಪುರ : ಪ್ರತ್ಯೇಕ ಪ್ರಕರಣಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು 148 ಯುವತಿಯರನ್ನು ರಕ್ಷಿಸಿದ್ದು , ಆರು ಮಂದಿ ಶಂಕಿತರನ್ನು ಬಂಧಿಸಿದ್ದಾರೆ.
ಮಣಿಪುರದ ಟೆಗ್ನೌಪಾಲ್ ನಲ್ಲಿ ಕಾರ್ಯಾಚರಣೆಯೊಂದರಲ್ಲಿ 40 ಮಂದಿ ನೇಪಾಳದ ಯುವತಿಯರನ್ನು ರಕ್ಷಿಸಲಾಗಿದೆ.ಮೊರೇಹಾ ಪಟ್ಟಣದಲ್ಲಿ ಯುವತಿಯ ಜೊತೆಯಲ್ಲಿದ್ದ ಶಂಕಿತ ಕಳ್ಳ ಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಏಷ್ಯಾ ಹಾಗೂ ಮಧ್ಯ- ಪೂರ್ವ ರಾಷ್ಟ್ರಗಳಿಗೆ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತಿತ್ತು ಎಂಬುದಾಗಿ ಯುವತಿಯರು ಹೇಳಿದ್ದಾರೆ.
ನೇಪಾಳದಿಂದ ಅಪಾರ ಸಂಖ್ಯೆಯಲ್ಲಿ ಯುವತಿಯರನ್ನು ಅಕ್ರಮವಾಗಿ ಕಳ್ಳ ಸಾಗಣೆ ಮಾಡಲಾಗುತ್ತಿರುವ ಬಗ್ಗೆ ನೇಪಾಳದಲ್ಲಿನ ಸ್ವಯ ಸೇವಾ ಸಂಸ್ಥೆಯೊಂದು ದೆಹಲಿ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ ನಂತರ ಟೆಗ್ನೌಪಾಲ್ ಜಿಲ್ಲಾ ಪೊಲೀಸರು ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದು, ವಾಹನಗಳ ತಪಾಸಣೆ ನಡೆಸಿದ್ದಾರೆ.
ಪೊಲೀಸ್ ತಂಡ ಕಾರ್ಯಾಚಾರಣೆ ಮುಂದುವರೆಸಿದ್ದು, ಯುವತಿಯರನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಹೋಟೆಲ್ ನಲ್ಲಿದ್ದ ಕಳ್ಳ ಸಾಗಣೆದಾರನೊಬ್ಬನನ್ನು ಬಂಧಿಸಿದ್ದಾರೆ. ನಂತರ ಮೊರೇಹಾದಲ್ಲಿ 20ಕ್ಕೂ ಹೆಚ್ಚು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತಮ ಉದ್ಯೋಗ ಮತ್ತಿತರ ಆಮಿಷವೊಡ್ಡಿ ಮಣಿಪುರ ಮೂಲಕ ಇರಾಕ್ ಮತ್ತು ಕುವೈತ್ ರಾಷ್ಟ್ರಗಳಿಗೆ ಕಳುಹಿಸಲಾಗುತಿತ್ತು ಎಂದು ರಕ್ಷಿಸಲ್ಪಟ್ಟ ಯುವತಿಯರು ತಿಳಿಸಿದ್ದಾರೆ.
ಮತ್ತೊಂದು ದಾಳಿಯಲ್ಲಿ ಕೀಶಾಂಪತ್ ಥೋಚೋಮ್ ಲಿಕೈನಲ್ಲಿನ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿದ ಇಂಪಾಲ ಪೊಲೀಸರು 61ಕ್ಕೂ ಹೆಚ್ಚು ಯುವತಿಯರನ್ನು ಬಂಧಿಸಿದ್ದಾರೆ.
Advertisement