
ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ಜೂನ್ ನಲ್ಲಿ ಯೋಧನೊಬ್ಬನ ಹತ್ಯೆಗೆ ಸಂಬಂಧಪಟ್ಟಂತೆ ಭಾರತೀಯ ಸೇನೆ ಬುಧವಾರ ಮೂವರು ಯೋಧರನ್ನು ವಿಚಾರಣೆ ನಡೆಸಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಔರಂಗಾಜೇಬ್ ನನ್ನು ಅಪಹರಿಸಿ ಉಗ್ರರು ಕೊಂದಿದ್ದರು. ಈದ್ ಜಿಲ್ಲೆಯಲ್ಲಿ ತನ್ನ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲೆಂದು ಔರಂಗಜೇಬ್ ಪೂಂಚ್ ಜಿಲ್ಲೆಗೆ ಬರುತ್ತಿದ್ದ ವೇಳೆ ಅಪಹರಣವಾಗಿದೆ.
ಮೂವರು ಯೋಧರು ರಾಷ್ಟ್ರೀಯ ರೈಫಲ್ 44ಕ್ಕೆ ಸೇರಿದವರಾಗಿದ್ದು, ಔರಂಗಾಜೇಬ್ ನ ಬಗ್ಗೆ ಉಗ್ರರಿಗೆ ಮಾಹಿತಿ ನೀಡಿದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ.
ಔರಂಗಾಜೇಬ್ ಹಿಜ್ ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಗುಂಪಿನ ಸಮೀರ್ ಟೈಗರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಅಧಿಕಾರ ತಂಡದಲ್ಲಿ ಕೂಡ ಇದ್ದರು.
ಯೋಧನ ಸಾವಿನ ನಂತರ ಕುಟುಂಬ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಸರ್ಕಾರಕ್ಕೆ ರಾಜ್ಯದಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕುವಂತೆ ಮನವಿ ಮಾಡಿತ್ತು.
ಕಳೆದ ಗಣರಾಜ್ಯೋತ್ಸವದಲ್ಲಿ ಯೋಧ ಔರಂಗಜೇಬ್ ಗೆ ಮರಣೋತ್ತರ ಶೌರ್ಯಚಕ್ರ ಪದಕ ನೀಡಿ ಗೌರವಿಸಿತ್ತು.
Advertisement