ಫೆ. 12ಕ್ಕೆ ಸಂಸತ್ತಿನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಸುಮಾರು ಆರು ತಿಂಗಳ ಬಳಿಕ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಅವರ ಭಾವಚಿತ್ರ ಅನಾವರಣಗೊಳ್ಳಲಿದೆ.
ಫೆ. 12ಕ್ಕೆ ಸಂಸತ್ತಿನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ
ಫೆ. 12ಕ್ಕೆ ಸಂಸತ್ತಿನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಸುಮಾರು ಆರು ತಿಂಗಳ ಬಳಿಕ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಅವರ ಭಾವಚಿತ್ರ ಅನಾವರಣಗೊಳ್ಳಲಿದೆ. ಇದೇ ಫೆಬ್ರವರಿ 12ರಂದು ವಾಜಪೇಯಿ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಸ್ಥಾಪನೆ ಮಾಡಲಾಗುವುದು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ, ಸಚಿವರು ಮತ್ತು ವಿವಿಧ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ಭಾರತ ರತ್ನ ಅಟಲ್ ಅವರ ಭಾವಚಿತ್ರ  ಅನಾವರಣಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಿಜೆಪಿ ಪಕ್ಷದ ಹಿರಿಯ ಮುತ್ಸದ್ದಿ  ವಾಜಪೇಯಿ ಅವರು 1996 ರಲ್ಲಿ 13 ದಿನಗಳ ಕಾಲ ಸೇರಿದಂತೆ ಮೂರು ಬಾರಿ ಭಾರತದ ಪ್ರಧಾನಿಗಳಾಗಿದ್ದರು.1999ರಿಂದ 2004ರವರೆಗೆ ಅವರು ಐದು ವರ್ಷ ಕಾಲ ಅವರ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಅಧಿಕಾರದಲಿತ್ತು.
1924 ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ್ದ ವಾಜಪೇಯಿ ಸುದೀರ್ಘವಾದ ಅನಾರೋಗ್ಯದ ನಂತರ ಆಗಸ್ಟ್ 16, 2018ರಂದು ನಿಧನರಾದರು.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಪಾರ್ಲಿಮೆಂಟ್ಸ್ ಪೋಟ್ರೇಟ್ ಸಮಿತಿಯ ಸಭೆಯಲ್ಲಿ ಡಿಸೆಂಬರ್ 18 ರಂದು ಭಾರತ ರತ್ನ ವಾಜಪೇಯಿ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಸ್ಥಾಪಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಮಾಜಿ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿ ಇನ್ನೂ ಹಲವು ನಾಯಕರ ಭಾವಚಿತ್ರಗಳನ್ನು ಇದಾಗಲೇ ನಾವು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಕಾಣಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com