ಮುಜಾಫರ್ ನಗರ ಗಲಭೆ ಪ್ರಕರಣ: 7 ಜನರಿಗೆ ಜೀವಾವಧಿ ಶಿಕ್ಷೆ

2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದ್ದ ಗಲಭೆ ಪ್ರಕರಣದ 7 ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮುಜಾಫರ್ ನಗರ ಗಲಭೆ ಪ್ರಕರಣ: 7 ಜನರಿಗೆ ಜೀವಾವಧಿ ಶಿಕ್ಷೆ
ಮುಜಾಫರ್ ನಗರ ಗಲಭೆ ಪ್ರಕರಣ: 7 ಜನರಿಗೆ ಜೀವಾವಧಿ ಶಿಕ್ಷೆ
ಮುಜಾಫರ್ ನಗರ: 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದ್ದ ಗಲಭೆ ಪ್ರಕರಣದ 7 ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 
ಮುಜಾಫರ್ ನಗರದಲ್ಲಿ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ್ದರ ನಂತರದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣದಲ್ಲಿ 7 ಜನರನ್ನೂ ಕೋರ್ಟ್ ಅಪರಾಧಿಗಳೆಂದು ತೀರ್ಪು ಪ್ರಕಟಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ 5 ಅಪರಾಧಿಗಳು ಜೈಲಿನಲ್ಲೇ ಇದ್ದರೆ ಕಳೆದ ವರ್ಷ ಅಲ್ಲಹಾಬಾದ್ ಹೈಕೋರ್ಟ್ ಇಬ್ಬರಿಗೆ ಜಾಮೀನು ನೀಡಿತ್ತು. 
ಶಹನವಾಜ್, ಇಬ್ಬರು ಸಹೋದರರಾದ ಗೌರವ್ ಹಾಗೂ ಸಚಿನ್ 2013 ರ ಆಗಸ್ಟ್ 27 ರಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹತ್ಯೆಯಾಗಿದ್ದರು. ಈ ಬಳಿಕ ಮುಜಾಫರ್ ನಗರದಲ್ಲಿ ಗಲಭೆ ಉಂಟಾಗಿತ್ತು. ಗಲಭೆಯಲ್ಲಿ 62 ಜನರು ಮೃತಪಟ್ಟಿದ್ದರು. 50,000 ಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com