ಸಂಸತ್ತಿನಲ್ಲಿ ಅಪ್ಪಿಕೊಂಡಿದ್ದು, ಕಣ್ಣು ಹೊಡೆದದ್ದು ಇದೇ ಮೊದಲು: ರಾಹುಲ್ ಗಾಂಧಿಗೆ ಮೋದಿ ಟಾಂಗ್

ರಾಫೆಲ್ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎನ್ನಲಾಗಿತ್ತು, ಆದರೆ ನನಗೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ರಾಫೆಲ್ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎನ್ನಲಾಗಿತ್ತು, ಆದರೆ ನನಗೆ ಅಂತಹದ್ದೇನೂ ಕಾಣಲಿಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹದಿನಾರನೇ ಲೋಕಸಭೆ ಅಧಿವೇಶನದ ಅಂತಿಮ ದಿನದ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ರಾಫೆಲ್ ವಿವಾದ ಕುರಿತು ರಾಹುಲ್ ಗಾಂಧಿ ತಾವು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹಿಂದೊಮ್ಮೆ ಹೇಳಿದ್ದರು. ಆದರೆ ಅಂತಹದೇನೂ ಆಗಲಿಲ್ಲ." ಎಂದಿದ್ದಾರೆ.
"ಚುನಾವಣೆಯಲ್ಲಿ ಎನ್ ಡಿಎ ಗೆ ಬಹುಮತ ಸಿಕ್ಕ ಈ ಐದು ವರ್ಷಗಳಲ್ಲಿ ಭಾರತದ ಗೌರವ ಜಾಗತಿಕ ಮಟ್ಟದಲ್ಲಿ ವೃದ್ದಿಸಿದೆ. ಇದುವೇ ದೇಶದ ಅಭಿವೃದ್ದಿಗೆ ಸಹ ಕಾರಣವಾಗಿದೆ."
ಪ್ರಧಾನಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ. ರಾಫೆಲ್ ಬಗ್ಗೆ ರಾಹುಲ್ ಟೀಕೆಗಳನ್ನು ಉಲ್ಲೇಖಿಸಿದ ಪ್ರಧಾನಿ "ರಾಹುಲ್ ಓರ್ವ ಸಂಸದರು, ಆದರೆ ಅವರು ನನ್ನನ್ನು ತಬ್ಬಿಕೊಂಡದ್ದು, ಕಣ್ಣು ಹೊಡೆದದ್ದು ಎಲ್ಲವೂ ಓರ್ವ ಸಂಸತ್ ಸದಸ್ಯರ ಕಡೆಯಿಂದ ಇದೇ ಮೊದಲ ಬಾರಿಗೆ ನೊಡಿದ್ದೇನೆ ಎಂದರು.
ಲೋಕಸಭೆ ಸಭಾಧ್ಯಕ್ಷೆಯಾದ ಸುಮಿತ್ರಾ ಮಹಾಜನ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಪ್ರಧಾನಿ  ಈ ಲೋಕಸಭೆಯ 17 ಅಧಿವೇಶಗಳ ಪೈಕಿ ಎಂಟು ಅಧಿವೇಶನಗಳು 100 ಪ್ರತಿಶತದಷ್ಟು ಯಶಸ್ವಿಯಾಗಿದೆ  ಅಲ್ಲದೆ ಒಟ್ಟಾರೆ ಯಶಸ್ವಿ ಕಲಾಪವನ್ನು ಕುರಿತಂತೆ ಹೇಳಿದರೆ ಶೇಕಡಾ 85ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಯಶಸ್ಸು ಕಂಡಿದೆ ಎಂದರು.
ಕೆಲ ತಪ್ಪಾದ ಆಜ್ಞೆ, ಕಾನೂನುಗಳಿಂದಾಗಿ ಭಾರತವು ಜಾಗತಿಕವಾಗಿ ತನ್ನ ಗೌರವಕ್ಕೆ ಕುಂದು ತಂದುಕೊಂಡಿತ್ತು.ಆದರೆ ಇದೀಗ ಬಹುಮತದ ಸರ್ಕಾರದಿಂದ ಜಾಗತಿಕವಾಗಿ ದೇಶದ ಆತ್ಮಗೌರವ ಇಮ್ಮಡಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಬೆಳಗುತ್ತಿದೆ. ಇದರೊಡನೆ ದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾರತದ ಜಾಗತಿಕ ಕೀರ್ತಿಗೆ ಹೊಣೆಗಾರರಾಗಿದ್ದಾರೆ. ಲೋಕಸಭೆಯಲ್ಲಿ ಸರಕಾರವು ಬಹುಮತವನ್ನು ಪಡೆದುಕೊಂಡಿರುವುದೇ ಇದಕ್ಕೆಲ್ಲಾ ಕಾರಣ ಎಂದು ಪ್ರಧಾನಿ ಹೇಳಿದ್ದಾರೆ.
ಇಷ್ಟೆಲ್ಲಾ ಸಾಧನೆಗಳ ಕಾರಣಕರ್ತರು ದೇಶದ ಕೋಟಿ ಸಂಖ್ಯೆಯ ನಾಗರಿಕರೇ ಆಗಿದ್ದಾರೆ ಎಂದೂ ಪ್ರಧಾನಿ ಅಭಿಪ್ರಾಯಪಟ್ಟರು.
ತನ್ನ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿ, ಭಾರತವು 6 ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ವೇಗವಾಗಿ ದಾಪುಗಾಲು ಇಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
16ನೇ ಲೋಕಸಭೆಯಲ್ಲಿ ಮಂಡಿಸಲಾದ 219 ಮಸೂದೆಗಳ ಪೈಕಿ ಕಪ್ಪು ಹಣದ ನಿಯಂತ್ರಣ ಮಸೂದೆ ಸೇರಿ 203 ಮಸೂದೆಗಳು ಅಂಗೀಕಾರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com