ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಗ್ರಾಹಕರಿಗೆ ಮಾರ್ಚ್ 31ರವರೆಗೆ ಗಡುವು ವಿಸ್ತರಣೆ!

ಕೇಬಲ್ ಹಾಗೂ ಡಿಟಿಎಚ್ ಟಿವಿ ಚಾನೆಲ್ ಗಳ ಮಾಸಿಕ ದರ ಬದಲಾಗಿದ್ದು ಫೆಬ್ರವರಿ 1ರಿಂದ ಹೊಸ ನಿಮಯ ಜಾರಿಯಲ್ಲಿದೆ. ಈ ಹೊಸ ನಿಯಮಕ್ಕೆ ಇನ್ನೂ ಬದಲಾಗದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಬಲ್ ಹಾಗೂ ಡಿಟಿಎಚ್ ಟಿವಿ ಚಾನೆಲ್ ಗಳ ಮಾಸಿಕ ದರ ಬದಲಾಗಿದ್ದು ಫೆಬ್ರವರಿ 1ರಿಂದ ಹೊಸ ನಿಮಯ ಜಾರಿಯಲ್ಲಿದೆ. ಈ ಹೊಸ ನಿಯಮಕ್ಕೆ ಇನ್ನೂ ಬದಲಾಗದ ಟಿವಿ ಗ್ರಾಹಕರಿಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಾರ್ಚ್ 31ರವರೆಗೆ ಗಡುವು ವಿಸ್ತರಿಸಿದೆ. 
ಟ್ರಾಯ್ ಅದಾಗಲೇ 8 ಬಾರಿ ಪತ್ರಿಕಾ ಪ್ರಕಟನೆ ಹೊರಡಿಸುವ ಮೂಲಕ ಜನರಲ್ಲಿ ಈ ಬಗ್ಗೆ ಅರವು ಮೂಡಿಸುವ ಪ್ರಯತ್ನ ಮಾಡಿತ್ತು. ಆದರೆ ಚಾನೆಲ್ ಆಯ್ಕೆ ಸ್ವಾತಂತ್ರ್ಯ ಸರಳ ಸೂತ್ರ ಎನ್ನಲಾಗಿದ್ದರೂ, ಜಾರಿಯಲ್ಲಿರುವ ಸಮಸ್ಯೆಯಿಂದ ಗ್ರಾಹಕರು ಚಾನೆಲ್ ಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚಾನೆಲ್ ಆಯ್ಕೆ ಸ್ವಾತಂತ್ರ್ಯಕ್ಕೆ ಗಡುವು ನೀಡಲಾಗಿದೆ. 
ಗ್ರಾಹಕುರ ಹೊಸ ನಿಮಯದ ಅನುಸಾರ ಪ್ರತಿ ತಿಂಗಳು 100 ಚಾನೆಲ್ ಗಳಿಗೆ 153 ರು. ಪಾವತಿಸಬೇಕಾಗುತ್ತದೆ. ನೀವು 100 ಚಾನೆಲ್ ಗಳನ್ನು ಆರಿಸಿಕೊಂಡು ಬಳಿಕ ಹೆಚ್ಚುವರಿ 25 ಚಾನೆಲ್ ಗಳಿಗಾಗಿ 20 ರೂ, ಪಾವತಿಸಬೇಕು. ಇನ್ನು ಪೇ-ಚಾನೆಲ್ ಗಳಿಗೆ ಸ್ಥಿರ ಬೆಲೆಯನ್ನು ನಿಗದಿ ಮಾಡಲಾಗಿದ್ದು ಅದರಂತೆ ಹಣ ನೀಡಬೇಕು. ಟ್ರಾಯ್ ನೀಡಿರುವ ಹೊಸ ನಿಯಮದಂತೆ ಈ ದರಗಳು 1 ರೂ. ನಿಂದ 19 ರೂ, ಒಳಗಿರಲಿದೆ.
ಟ್ರಾಯ್ ವರದಿ ಪ್ರಕಾರ, 17 ಕೋಟಿ ಟಿವಿ ಚಾನೆಲ್ ಗ್ರಾಹಕರಲ್ಲಿ ಇದುವರೆಗೆ ಕೇವಲ 9 ಕೋಟಿ ಮಂದಿ ಮಾತ್ರ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com