ಸಮಾಜವಾದಿ ಪಕ್ಷ ಮೋದಿ ವಿರುದ್ಧದ ಮಹಾಘಟಬಂಧನದ ಜೊತೆ ಗುರುತಿಸಿಕೊಂಡಿದ್ದರೆ. ಇತ್ತ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸಂಸತ್ ನಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ. ರಾಜಕೀಯ ವಲಯದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಈ ಹೇಳಿಕೆಗೆ ಭಾರಿ ಅಚ್ಚರಿ ವ್ಯಕ್ತವಾಗುತ್ತಿದೆ. ಈ ನಡುವೆ ಸಮಾಜವಾದಿ ಪಕ್ಷದ ಮತ್ತೋರ್ವ ಮುಖಂಡ ಆಜಂ ಖಾನ್, ಮುಲಾಯಂ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಮುಲಾಯಂ ಸಿಂಗ್ ಸ್ವತಃ ಹೇಳಿಲ್ಲ. ಬದಲಾಗಿ ಅದನ್ನು ಬಲವಂತವಾಗಿ ಹೇರಿಕೆ ಮಾಡಿ ಹೇಳಿಸಲಾಗಿದೆ ಎಂದು ಹೇಳಿದ್ದಾರೆ.