ಇನ್ನು ಮುಂದೆ ಆಸ್ಪತ್ರೆಯಲ್ಲೇ ಸಿಗುತ್ತೆ ನವಜಾತ ಶಿಶುಗಳ ಜಾತಕ!: ಈ ವಿನೂತನ ಸೇವೆ ಜಾರಿಗೆ ಬರಲಿರುವುದು ಎಲ್ಲಿ ಗೊತ್ತೇ?
ಇನ್ನು ಮುಂದೆ ಆಸ್ಪತ್ರೆಯಲ್ಲೇ ಸಿಗುತ್ತೆ ನವಜಾತ ಶಿಶುಗಳ ಜಾತಕ!: ಈ ವಿನೂತನ ಸೇವೆ ಜಾರಿಗೆ ಬರಲಿರುವುದು ಎಲ್ಲಿ ಗೊತ್ತೇ?

ಇನ್ಮುಂದೆ ರಾಜಸ್ತಾನ ಆಸ್ಪತ್ರೆಗಳಲ್ಲೇ ಸಿಗುತ್ತೆ ನವಜಾತ ಶಿಶುಗಳ ಜಾತಕ!

ಎಲ್ಲವೂ ಅಂದುಕೊಂಡಂತೆಯೇ ನಡೆದರೆ ನವಜಾತ ಶಿಶುಗಳ ಜಾತಕವನ್ನು ಇನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿಯೇ ಪಡೆಯುವ ಸೌಲಭ್ಯ...
Published on
ಜೈಪುರ: ಎಲ್ಲವೂ ಅಂದುಕೊಂಡಂತೆಯೇ ನಡೆದರೆ ನವಜಾತ ಶಿಶುಗಳ ಜಾತಕವನ್ನು ಇನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿಯೇ ಪಡೆಯುವ ಸೌಲಭ್ಯ ರಾಜಸ್ಥಾನದಲ್ಲಿ ಜಾರಿಗೆ ಬರಲಿದೆ. ಹೆರಿಗೆ ನಂತರ ಡಿಸ್ಚಾರ್ಜ್ ಮಾಡುವ ವೇಳೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಅಗತ್ಯ ದಾಖಲೆಗಳ ಜೊತೆಯಲ್ಲಿ ಜಾತಕವನ್ನೂ ಪೋಷಕರಿಗೆ ನೀಡಲಿದ್ದಾರೆ. 
ನವಜಾತ ಶಿಶುಗಳ ಜಾತಕವನ್ನು ಆಸ್ಪತ್ರೆಯಲ್ಲೇ ನೀಡುವ  ಪ್ರಸ್ತಾವನೆ ಹಂತದಲ್ಲಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆ ಜಾರಿಯಾಗಿದ್ದೇ ಆದಲ್ಲಿ ಇದು ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. ಅಂದಹಾಗೆ ಈ ಪ್ರಸ್ತಾವನೆಯನ್ನು  ನೀಡಿರುವುದು ರಾಜಸ್ಥಾನ ಸಂಸ್ಕೃತ ಶಿಕ್ಷಣ ಇಲಾಖೆ. ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಜೈಪುರದ ಜಗದ್ಗುರು ರಾಮನಂದಾಚಾರ್ಯ ರಾಜಸ್ಥಾನ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿತ್ತು. ರಾಜಸ್ಥಾನಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆ ಅಂಶಗಳಲ್ಲಿ ಸಂಸ್ಕೃತ ಅಭ್ಯಾಸವನ್ನು ಉತ್ತೇಜಿಸುವುದು, ವೈದಿಕ ಸಂಸ್ಕಾರ ಹಾಗೂ ಶಿಕ್ಷಾ ಬೋರ್ಡ್ ನ್ನು ಸ್ಥಾಪಿಸುವುದೂ ಸಹ ಒಂದಾಗಿತ್ತು. ಈ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಆಸ್ಪತ್ರೆಯಲ್ಲೇ ಜಾತಕ ನೀಡುವ ಯೋಜನೆಯನ್ನೂ ಜಾರಿಗೆ ತರಲಾಗುತ್ತಿದೆ. 
ಈ ಯೋಜನೆಗೆ ರಾಜೀವ್ ಗಾಂಧಿ ಜನ್ಮಪತ್ರಿ ನಾಮಕರಣ ಯೋಜನೆ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ 3,000 ಜ್ಯೋತಿಷಿಗಳ ನೆರವು ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com