ಸಕ್ಕರೆಗೆ 2 ರೂ ಕನಿಷ್ಟ ಮಾರಾಟ ಬೆಲೆ ಏರಿಕೆ ಮಾಡಿದ ಸರ್ಕಾರ
ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಬ್ಬು ಬೆಳೆಗಾರರ ಬಾಕಿ ಏರಿಕೆಯಿಂದ ಉಂಟಾಗುವ ಡ್ಯಾಮೇಜ್ ನ್ನು ಸರಿಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫೆ.14 ರಂದು ಸಕ್ಕರೆಗೆ ಕನಿಷ್ಟ ಮಾರಾಟ ಬೆಲೆಯನ್ನು 2 ರೂಪಾಯಿಗೆ ಏರಿಕೆ ಮಾಡಿದೆ.

ಸಕ್ಕರೆಗೆ ಈಗ ಕನಿಷ್ಟ ಮಾರಾಟ ಬೆಲೆ ಪ್ರತಿ ಕೆ.ಜಿಗೆ 31 ರೂಪಾಯಿಯಾಗಲಿದ್ದು, ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಲು ಸಹಕಾರಿಯಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಇನ್ನು ಮುಂದೆ ಮಿಲ್ ಗಳು ಸಕ್ಕರೆಯನ್ನು ಪ್ರತಿ ಕೆಜಿಗೆ 31 ರೂಪಾಯಿಗಳಿಗಿಂತ ಕಡಿಮೆ ಮಾರಾಟ ಮಾಡುವಂತಿಲ್ಲ.
ಜನವರಿ ತಿಂಗಳವರೆಗೆ ಕಬ್ಬುಬೆಳೆಗಾರರಿಗೆ ಮಿಲ್ ಗಳು ನೀಡಬೇಕಿರುವ ಒಟ್ಟು ಬಾಕಿ ಮೊತ್ತ 20,000 ಕೋಟಿ ರೂಪಾಯಿಗೆ ತಲುಪಿದೆ ಎಂದು ಇಂಡಸ್ಟ್ರಿ ಸಂಸ್ಥೆ ಐಎಸ್ಎಂಎ ಹೇಳಿತ್ತು.