ರಜೆ ಮುಗಿಸಿ ಹೋದ ಮೂರು ದಿನಗಳಲ್ಲೇ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಹುತಾತ್ಮ ಯೋಧನ ಕುಟುಂಬ

ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.
ಪಂಕಜ್ ತ್ರಿಪಾಠಿ
ಪಂಕಜ್ ತ್ರಿಪಾಠಿ
ಗೋರಖ್ ಪುರ: ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು  ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.
ಆದರೆ, ರಜೆ ಮುಗಿಸಿ ಕೇವಲ ಮೂರು ದಿನವಾಗಿತ್ತಷ್ಟೇ. ಈಗ ಕುಟುಂಬ ಸದಸ್ಯರು ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಕಾಯುವಂತಾಗಿದೆ.
ಸೇನೆಯ ಅಧಿಕಾರಿಗಳು ಪೋನ್ ಮೂಲಕ ಈ ವಿಷಯ ತಿಳಿಸಿದಾಗ ನನ್ನ ಮಗ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ಹೆಮ್ಮೆ ಉಂಟಾಯಿತು. ಆದರೆ, ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುತಾತ್ಮ ಯೋಧನ ತಂದೆ ಓಂ ಪ್ರಕಾಶ್  ಒತ್ತಾಯಿಸಿದರಲ್ಲದೇ, ಇದು ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯ ಎಂದರು.
ಪಂಕಜ್ ತ್ರಿಪಾಠಿ ಕಾಶ್ಮೀರಕ್ಕೆ ತೆರಳುವ ಮುನ್ನ  ಎರಡು ತಿಂಗಳು ಕುಟುಂಬದೊಂದಿಗೆ ಕಾಲ ಕಳೆದಿದ್ದರು ಎಂದು ಅವರು ಹೇಳಿದರು.ಗ್ರಾಮದಲ್ಲಿನ ಅನೇಕ ಕುಟುಂಬಗಳಲ್ಲಿ ಇಂದು ಬೆಳಗ್ಗೆಯಿಂದ ಅಡುಗೆ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಗ್ರಾಮಸ್ಥರು ಬೀದಿಯಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಂಕಜ್ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com