ಕಾಶ್ಮೀರಿಗಳ ಎಲ್ಲವನ್ನೂ ಬಹಿಷ್ಕರಿಸಿ: ಮೇಘಾಲಯ ರಾಜ್ಯಪಾಲರ ಶಾಕಿಂಗ್ ಹೇಳಿಕೆ

ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರಿಗಳ ಎಲ್ಲ ಸರಕು ಸಾಗಣೆಯನ್ನು ನಿರ್ಬಂಧಿಸುವಂತೆ ಹಾಗೂ ಜನರು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳದಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೇಘಾಲಯ: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ  ಕಾಶ್ಮೀರಿಗಳ ಎಲ್ಲ ಸರಕು ಸಾಗಣೆಯನ್ನು ನಿರ್ಬಂಧಿಸುವಂತೆ  ಹಾಗೂ  ಜನರು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳದಂತೆ    ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

'ಕಾಶ್ಮೀರಿಗಳ ಎಲ್ಲವನ್ನೂ ಬಹಿಷ್ಕರಿಸಿ, ಕಾಶ್ಮೀರ  ಮಾರುಕಟ್ಟೆ ಅಥವಾ ವ್ಯಾಪಾರಿಗಳಿಂದ ಯಾವುದೇ ಸರಕುಗಳನ್ನು ಕೊಳ್ಳಬೇಡಿ, ಮುಂದಿನ ಎರಡು ವರ್ಷಗಳ ಕಾಲ ಕಾಶ್ಮೀರ , ಪವಿತ್ರ ಹಿಂದೂ ಕ್ಷೇತ್ರ ಅಮರನಾಥಕ್ಕೆ  ಹೋಗಬೇಡಿ ಎಂದು  ಅವರು ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.

 ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಿಮ್ಮ ವಿದ್ಯುತ್ ಗಾಗಿ ನಮ್ಮ ನದಿ ನೀರನ್ನು ಬಳಸುವುದನ್ನು ಏಕೆ ನಿಲ್ಲಿಸುತ್ತಿಲ್ಲ ಎಂದು ಪ್ರಶ್ನಿಸಿದ್ದು,  ತಥಾಗತ ರಾಯ್ ಅಂತವರಿಗೆ ಕಾಶ್ಮೀರ ಬೇಕು ಆದರೆ, ಕಾಶ್ಮೀರಿಗಳು ಬೇಕಾಗಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com