ಆಂಧ್ರ ಪ್ರದೇಶ: ಗರ್ಭಿಣಿಯರಿಗೆ ಹೆರಿಗೆಗೆ ಸಹಾಯವಾಗುವ 108 ಆಂಬ್ಯುಲೆನ್ಸ್

ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪೆಡ್ಡಲಕ್ಷ್ಮೀಪುರಂ ಗ್ರಾಮದ 20 ವರ್ಷಯ ಯುವತಿ ಗವ್ವಲ ...
108 ಆಂಬ್ಯುಲೆನ್ಸ್ ನಲ್ಲಿ ಹೆರಿಗೆಯಾದ ಗವ್ವಲ ಚಮಂತಿ
108 ಆಂಬ್ಯುಲೆನ್ಸ್ ನಲ್ಲಿ ಹೆರಿಗೆಯಾದ ಗವ್ವಲ ಚಮಂತಿ
ಶ್ರೀಕಾಕುಲಂ: ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪೆಡ್ಡಲಕ್ಷ್ಮೀಪುರಂ ಗ್ರಾಮದ 20 ವರ್ಷಯ ಯುವತಿ ಗವ್ವಲ ಚಮಂತಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಗವ್ವಲಗೆ ಹೆರಿಗೆ ಸಮಯವಾಯಿತೆಂದು ಭಾವಿಸಿ 108 ಆಂಬ್ಯುಲೆನ್ಸ್ ನ ಸಿಬ್ಬಂದಿ ಕೆಲ ಮಹಿಳೆಯರ ಸಹಾಯದಿಂದ ಆಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದರು. ಗಂಡು ಮಗುವಿಗೆ ಜನ್ಮ ನೀಡಿದ ಗವ್ವಲನನ್ನು ಆಂಬ್ಯುಲೆನ್ಸ್ ನಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಇಚ್ಚಪುರಂನ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿದರು.
ಸರ್ಕಾರದ 108 ಆಂಬ್ಯುಲೆನ್ಸ್ ನಲ್ಲಿ ಗರ್ಭಿಣಿಯರು ಹೆರಿಗೆಯಾಗುತ್ತಿರುವುದು ಇದೇನು ಮೊದಲಲ್ಲ. ಒಂದು ವಾರದ ಹಿಂದೆ ಫೆಬ್ರವರಿ 14ರಂದು ಮಂಡಸ ಮಂಡಲ್ ನ ಕಿಲ್ಲಿಯೊ ಕಾಲೊನಿಯ ಸವರ ಕಸ್ತೂರಿ ಆಸ್ಪತ್ರೆಗೆ ಹೋಗುವಾಗ ದಾರಿ ಮಧ್ಯೆ ಮಗುವಿಗೆ ಜನ್ಮ ನೀಡಿದ್ದರು. ಪ್ರತಿ ತಿಂಗಳು ಈ ಜಿಲ್ಲೆಯಲ್ಲಿ 108 ಆಂಬ್ಯುಲೆನ್ಸ್ ನಲ್ಲಿ 100ರಿಂದ 150 ಹೆರಿಗೆಗಳು ಆಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com