ಪುಲ್ವಾಮ ದಾಳಿಗೆ ವಿರೋಧದ ಹೊರತಾಗಿಯೂ ಮತ್ತೆ ಬಾಲ ಬಿಚ್ಚಿದ ಪಾಕ್: ರಜೌರಿಯಲ್ಲಿ ಕದನ ವಿರಾಮ ಉಲ್ಲಂಘನೆ
ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಇಡೀ ವಿಶ್ವವೇ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದ್ದರೂ ಪಾಕಿಸ್ತಾನ ಕಿಂಚಿತ್ತೂ ಬದಲಾಗದೇ ಮತ್ತೆ ಭಾರತದ ಮೇಲೆ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಪುಲ್ವಾಮ ದಾಳಿಗೆ ವಿರೋಧದ ಹೊರತಾಗಿಯೂ ಮತ್ತೆ ಬಾಲ ಬಿಚ್ಚಿದ ಪಾಕ್: ರಜೌರಿಯಲ್ಲಿ ಕದನ ವಿರಾಮ ಉಲ್ಲಂಘನೆ
ಶ್ರೀನಗರ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಇಡೀ ವಿಶ್ವವೇ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದ್ದರೂ ಪಾಕಿಸ್ತಾನ ಕಿಂಚಿತ್ತೂ ಬದಲಾಗದೇ ಮತ್ತೆ ಭಾರತದ ಮೇಲೆ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್ ಬಳಿ ಇರುವ ಫಾರ್ವರ್ಡ್ ಪೋಸ್ಟ್ ಗಳು ಹಾಗೂ ಗ್ರಾಮೀಣ ಭಾಗದಲ್ಲಿ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಸುಮಾರು 16:30 ಗಂಟೆಗಳಿಗೆ ಪಾಕಿಸ್ತಾನ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಪ್ರಾರಂಭಿಸಿದ್ದು ಶೆಲ್ ದಾಳಿ ನಡೆಸಿದೆ.
ಸೇನಾಪಡೆ ಪಾಕಿಸ್ತಾನದ ಯೋಧರ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.