ಕಿಸಾನ್ ಸಮ್ಮಾನ್ ಯೋಜನೆ ನಿಮ್ಮ ಹಕ್ಕು, ರಾಜ್ಯಗಳ ಪಾತ್ರವಿಲ್ಲ, ಅಪಪ್ರಚಾರ ಮಾಡುವವರಿಗೆ ಪಾಠ ಕಲಿಸಿ: ರೈತರಿಗೆ ಮೋದಿ ಕರೆ

ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ರೈತರಿಗೆ ತಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ಹೇಳುತ್ತಲೇ ವಿಪಕ್ಷಗಳ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಮೋದಿ
ಮೋದಿ
ಗೋರಖ್ ಪುರ: ಕಿಸಾನ್ ಸಮ್ಮಾನ್ ಯೋಜನೆ ದೇಶದ ರೈತರ ಹಕ್ಕು, ಈ ಹಿಂದಿನ ಸರ್ಕಾರಗಳು ರೈತರ ಉದ್ಧಾರದ ಬಗ್ಗೆ ಕೆವಲ ಮಾತನಾಡುತ್ತಿದ್ದವು, ಯೋಜನೆಗಳನ್ನು ಕಾಗದಕ್ಕೆ ಅಷ್ಟೇ ಸೀಮಿತಗೊಳ್ಳುತ್ತಿದ್ದವು. ಆದರೆ ನಮ್ಮ ಸರ್ಕಾರ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ಅರ್ಪಿಸಿದೆ ಎಂದು ಮೋದಿ ಹೇಳಿದ್ದಾರೆ. 
ಫೆ.24 ರಂದು ಗೋರಖ್ ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿ, ರೈತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ರೈತರಿಗೆ ತಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ಹೇಳುತ್ತಲೇ ವಿಪಕ್ಷಗಳ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. 
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಆದಿಯಾಗಿ ಮಹಾಘಟಬಂಧನದಲ್ಲಿರುವ ಪಕ್ಷಗಳಿಗೆ ಆತಂಕ ಉಂಟಾಗಿತ್ತು. ಈ ಘೋಷಣೆಯಿಂದ ರೈತರು ಮೋದಿ ಪರವಾಗಲಿದ್ದಾರೆ ಎಂಬ ಆತಂಕದಿಂದ ಯೋಜನೆ ಬಗ್ಗೆ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. "ಮೋದಿ ಈಗ ಹಣ ನೀಡಿ ಆ ನಂತರ ವಾಪಸ್ ಕಸಿದುಕೊಳ್ಳಲಿದ್ದಾರೆ" ಎಂದು ಅಪಪ್ರಚಾರ ಮಾಡಲಾಗುತ್ತಿದೆ ಆದರೆ ಈ ಯೋಜನೆಯ ಇದು ನಿಮ್ಮ ಹಕ್ಕು, ಯಾರಿಗೂ ಹಣ ವಾಪಸ್ ಪಡೆಯುವ ಅಧಿಕಾರವಿಲ್ಲ. ಈ ರೀತಿ ಅಪಪ್ರಚಾರ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಮೋದಿ ರೈತರಿಗೆ ಕರೆ ನೀಡಿದ್ದಾರೆ. 
ಇದೇ ವೇಳೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೀಡಲಾಗುತ್ತಿರುವ ಪ್ರತಿ ಪೈಸೆಯೂ ಮೋದಿ ಸರ್ಕಾರದಿಂದ ನೀಡಲಾಗುತ್ತಿದೆ. ರಾಜ್ಯ ಸರ್ಕಾರಗಳ ಕೆಲಸ ಇದರಲ್ಲಿ ಏನೂ ಇಲ್ಲ. ಕೇವಲ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಿ ಹಣ ತಲುಪಿಸುವುದಷ್ಟೇ ಅವರ ಕೆಲಸ. ಕೆಲವು ರಾಜ್ಯ ಸರ್ಕಾರಗಳು ನಿದ್ದೆಯಿಂದ ಇನ್ನೂ ಎದ್ದಿಲ್ಲ, ಅಂತಹ ಸರ್ಕಾರಗಳೇನಾದರೂ ಫಲಾನುಭವಿಗಳಿಗೆ ಸರಿಯಾಗಿ ಹಣ ತಲುಪಿಸದೇ ಇದ್ದಲ್ಲಿ ರೈತರ ಶಾಪಕ್ಕೆ ಗುರಿಯಾಗುತ್ತಾರೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com