ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ: ಕಿಟಕಿ ಗಾಜು ಪುಡಿಪುಡಿ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಫೆ.23 ರಂದು ಕಲ್ಲು ತೂರಾಟ ನಡೆದಿದ್ದು, ಮುಖ್ಯ ಚಾಲಕನ ಮುಂಭಾಗದಲ್ಲಿರುವ ಗಾಜು ಹಾಗೂ ಕಿಟಕಿಯ ಗಾಜುಗಳು ಪುಡಿಯಾಗಿವೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ: ಕಿಟಕಿ ಗಾಜು ಪುಡಿಪುಡಿ
ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ: ಕಿಟಕಿ ಗಾಜು ಪುಡಿಪುಡಿ
ನವದೆಹಲಿ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಫೆ.23 ರಂದು ಕಲ್ಲು ತೂರಾಟ ನಡೆದಿದ್ದು, ಮುಖ್ಯ ಚಾಲಕನ ಮುಂಭಾಗದಲ್ಲಿರುವ ಗಾಜು ಹಾಗೂ ಕಿಟಕಿಯ ಗಾಜುಗಳು ಪುಡಿಯಾಗಿವೆ. 
ಶನಿವಾರ ವಾರಾಣಸಿ-ದೆಹಲಿ ನಡುವೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಅಚಲ್ಡಾ ಬಳಿ ದಿಬ್ರುಗಾರ್ ರಾಜಧಾನಿ ರೈಲು ಜಾನುವಾರು ಮೇಲೆ ಹೋದ ನಂತರ ಕಲ್ಲಿನ ದಾಳಿ ಪ್ರಾರಂಭವಾಗಿದೆ ಎಂದು ಉತ್ತರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. 
ಚಾಲಕನ ವಿಂಡ್ ಸ್ಕ್ರೀನ್ ಗೂ ಕಲ್ಲೇಟು ಬಿದ್ದಿದ್ದು, ಸಿ4, ಸಿ6, ಸಿ7, ಸಿ8, ಸಿ13  ಕೋಚ್ ನಂಬರ್ ಗಳಲ್ಲಿನ ಗಾಜುಗಳು ಪುಡಿಯಾಗಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಕ್ಷಣವೇ ಎಚ್ಚೆತ್ತ ತಾಂತ್ರಿಕ ಸಿಬ್ಬಂಧಿಗಳು ಪರಿಶೀಲನೆ ನಡೆಸಿದರು. ರೈಲು ಸಂಚಾರ ಮುಂದುವರೆಯಬಹುದಾಗಿದ್ದ ಹಿನ್ನೆಲೆಯಲ್ಲಿ ರೈಲು ಎಂದಿನಂತೆ ಸಂಚಾರ ಪ್ರಾರಂಭಿಸಿತು ಎಂದು ತಿಳಿದುಬಂದಿದೆ. 
ಗಾಜುಗಳು ಪುಡಿಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು ಸುರಕ್ಷಾ ಪರದೆಗಳನ್ನು ಅಳವಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com