ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ರಾಬರ್ಟ್ ವಾದ್ರಾ ಅವ್ರ ಕಛೇರಿ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಕಳೆದ ವರ್ಷ ವಶಕ್ಕೆ ಪಡೆದಿದ್ದ ಹಾರ್ಡ್ ಹಾಗೂ ಸಾಫ್ಟ್ ಕಾಪಿಗಳಲ್ಲಿರುವ ದಾಖಲೆ ಪ್ರತಿಗಳನ್ನು ವಾದ್ರಾಗೆ ಒದಗಿಸಿ ಎಂದು ದೆಹಲಿ ಕೋರ್ಟ್ ಸೋಮವಾರ ಇಡಿಗೆ ಆದೇಶಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಅರವಿ ಕುಮಾರ್ ಈ ನಿರ್ದೇಶನ ನೀಡಿದ್ದಾರೆ.
ವಶಕ್ಕೆ ಪಡೆಯಲಾದ ದಖಲೆಗಳನ್ನು ತನಗೆನೀಡುವವರೆಗೆ ಜಾರಿ ನಿರ್ದೇಶನಾಲಯ ತನ್ನನ್ನು ಪರ್ಶ್ನಿಸುವ ಪ್ರಕ್ರಿಯೆಗೆ ತಡೆ ನೀಡಬೇಕೆಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಕೋರ್ಟ್ ಗೆ ಮಾಡಿದ್ದ ಮನವಿ ಇಂದು ಮಧ್ಯಾಹ್ನ 2ಕ್ಕೆ ವಿಚರಣೆಗೆ ಬರಲಿದೆ.
ವಾದ್ರಾ ಅವರ ಕಛೇರಿಯಿಂದ ವಶಕ್ಕೆ ಪಡೆದ ದಾಖಲೆಗಳ ಆಧಾರದ ಮೇಲೆ ಇಡಿ ವಾದ್ರಾ ಅವರನ್ನು ಪ್ರಶ್ನಿಸುತ್ತಿದೆ. ಹೀಗಾಗಿ ಈ ದಾಖಲೆಗಳ ಪ್ರತಿಯನ್ನು ತನಗೆ ನೀಡಬೇಕೆಂದು ವಾದ್ರಾ ಶನಿವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.