ಮಧುರೈ ದೇವಸ್ಥಾನದಲ್ಲಿ ಸಿಗುತ್ತೆ ರುಚಿಯಾದ ಮಟನ್ ಬಿರಿಯಾನಿ ಪ್ರಸಾದ!

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಲಡ್ಡು, ಹಲ್ವಾ, ಬೂಂದಿ, ಪಾಯಸ ಸೇರಿದಂತೆ ಸಿಹಿ ತಿಂಡಿಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಆದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಧುರೈ: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಲಡ್ಡು, ಹಲ್ವಾ, ಬೂಂದಿ, ಪಾಯಸ ಸೇರಿದಂತೆ ಸಿಹಿ ತಿಂಡಿಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಆದರೆ 
ತಮಿಳುನಾಡಿನ ಮಧುರೈ ಜಿಲ್ಲೆಯ ಈ ದೇವಸ್ಥಾನದಲ್ಲಿ ಭಕ್ತರಿಗೆ ರುಚಿಯಾದ ಮಟನ್ ಬಿರಿಯಾನಿ ಪ್ರಸಾದ ವಿತರಣೆ ಮಾಡಲಾಗುತ್ತದೆ!
ಮಧುರೈ ಜಿಲ್ಲೆಯ ತಿರುಮಂಗಲಂ ತಾಲೂಕಿನ ವಡಕ್ಕಂಪಟ್ಟಿ ಗ್ರಾಮದ ಮುನಿಯಂಡಿ ಸ್ವಾಮಿ ದೇವಸ್ಥಾನದ ಮೂರು ದಿನಗಳ ಹಬ್ಬದಲ್ಲಿ ಮಟನ್ ಬಿರಿಯಾನಿ ಪ್ರಸಾದವನ್ನು ಭಕ್ತರಿಗೆ ನೀಡಲಾಗಿದೆ.
ಪ್ರಸಾದಕ್ಕಾಗಿ ಸುಮಾರು 2000 ಕೆಜಿ ಅಕ್ಕಿ ಹಾಗೂ 2000 ಕೆಜಿ ಮಟನ್ ಬಳಸಿದ್ದು, 
ಬಿರಿಯಾನಿಗೆ ಬೇಕಾದ ಅಗತ್ಯ ಸಾಮಗ್ರಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರೇ ದೇವಸ್ಥಾನಕ್ಕೆ ಹಣ ಸಹಾಯ ಮಾಡಿದ್ದಾರೆ. 
ಮುನಿಯಂಡಿ ಸ್ವಾಮಿ ಬಿರಿಯಾನಿ ಪ್ರಿಯರಾಗಿದ್ದರು ಎಂದು ಭಕ್ತರು ನಂಬಿದ್ದು, ಕಳೆದ 84 ವರ್ಷಗಳಿಂದ ಈ ಹಬ್ಬ ನಡೆಯುತ್ತಿದೆ ಎಂದು ದೇವಸ್ಥಾನದ ಭಕ್ತರೊಬ್ಬರು ಹೇಳಿದ್ದಾರೆ.
ಪ್ರತಿ ವರ್ಷ ಜನವರಿ 24, 25 ಹಾಗೂ 26ರಂದು ಈ ಉತ್ಸವ ಆಚರಿಸಲಾಗುತ್ತಿದ್ದು, ಬೆಳಗ್ಗಿನ ಜಾವ 4 ಗಂಟೆವರೆಗೆ ಸುಮಾರು 50ಕ್ಕೂ ಹೆಚ್ಚು ಕಂಟೈನರ್​ಗಳಲ್ಲಿ ಬಿರಿಯಾನಿ ತಯಾರು ಮಾಡಲಾಗಿದ್ದು, 5 ಗಂಟೆಯಿಂದ ಭಕ್ತಾಧಿಗಳಿಗೆ ಬಿರಿಯಾನಿ ಪ್ರಸಾದ ವಿತರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com