ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ

ಉರಿ ಮತ್ತು ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಆಡಳಿತಾತ್ಮಕ ವೈಫಲ್ಯದ ಕುರಿತು ನ್ಯಾಯಾಂಗ ವಿಚಾರಣೆಯನ್ನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುರ್ಪೀಂ ಕೋರ್ಟ್ ಸೋಮವಾರ ವಜಾ ...
ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ
ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ
ನವದೆಹಲಿ: ಉರಿ ಮತ್ತು ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಆಡಳಿತಾತ್ಮಕ ವೈಫಲ್ಯದ ಕುರಿತು ನ್ಯಾಯಾಂಗ ವಿಚಾರಣೆಯನ್ನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುರ್ಪೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ವಕೀಲ ವಿನೀತ್ ಧಂಡಾ ಸಲ್ಲಿಸಿದ ಅರ್ಜಿಯು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ರೀತಿಯಲ್ಲೂ ಸಶಸ್ತ್ರ ಪಡೆಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಳಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದ್ದು ನ್ಯಾಯಾಂಗ ತನಿಖೆಗೆ ನಾವು ಒಪ್ಪುವುದಿಲ್ಲ. ಎಂದು ಅಭಿಪ್ರಾಯಪಟ್ಟಿದೆ. 
ಫೆಬ್ರವರಿ 18 ರಂದು ಸಲ್ಲಿಕೆಯಾಗಿದ್ದ ಅರ್ಜಿಯಲ್ಲಿ ಕೇಂದ್ರ ಸರ್ಕಾರದಿಂದ ನೇಮಕಾವ್ಗಿದ್ದ ದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಕಮಿಷನ್ ಉರಿ ಹಾಗೂ ಪುಲ್ವಾಮಾ ಉಗ್ರ ದಾಳಿಗಳ ಹಿಂದಿನ ಭದ್ರತಾ ವೈಫಲ್ಯ, ಆಡಳಿತಾತ್ಮಕ ವಿಫಲತೆ ಕುರಿತು ತನಿಖೆ ನಡೆಸಬೇಕೆಂದು ಕೋರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com