ವೈಮಾನಿಕ ದಾಳಿ ಬೆನ್ನಲ್ಲೇ ಅತ್ಯಾಧುನಿಕ ಅವಳಿ ಕ್ಷಿಪಣಿ ಪರೀಕ್ಷೆ ನಡೆಸಿದ ಡಿಆರ್ ಡಿಒ

ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 350ಕ್ಕು ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ರಕ್ಷಣಾ....
ಕ್ಷಿಪಣಿ
ಕ್ಷಿಪಣಿ
ಭುವನೇಶ್ವರ: ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 350ಕ್ಕು ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಮಂಗಳವಾರ ಎರಡು ಅತ್ಯಾಧುನಿಕ ಕ್ಷಿಪಣಿಗಳ ನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಒಡಿಶಾದ ಬಾಲ್‌ಸೋರ್‌ನ ಕಡಲ ತೀರದಲ್ಲಿ  ಡಿಆರ್‌ಡಿಓ ವೇಗವಾಗಿ ಸಾಗಿ ಗಾಳಿಯಲ್ಲೇ ವೈರಿ ಪಡೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯಯುಳ್ಳ ಎರಡು ಅತ್ಯಾಧುನಿಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ  ನಡೆಸಿದೆ.
ವೈಮಾನಿಕ ದಾಳಿಯ ಬಳಿಕ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಅವಳಿ ಕ್ಷಿಪಣಿಗಳ ಪರೀಕ್ಷೆ ನಡೆಸುವ ಮೂಲಕ ನಮ್ಮ ಸೇನಾ ಪಡೆಗಳು ಈಗಾಗಲೇ ಸರ್ವ ಸನ್ನದ್ಧವಾಗಿವೆ ಎಂಬ ಸಂದೇಶವನ್ನು ಪಾಕ್‌ ಗೆ ರವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com