ಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ?

ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಹುಟ್ಟದಗಿಸಿದ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಬಗ್ಗೆ ಜಗತ್ತೇ ಮಾತನಾಡುತ್ತಿದ್ದು, ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಈ ಪೈಕಿ ಪಾಕಿಸ್ತಾನದ ಪ್ರತಿದಾಳಿಯ ವಿಫಲ
ವೈಮಾನಿಕ ದಾಳಿ: ಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ?
ವೈಮಾನಿಕ ದಾಳಿ: ಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ?
ನವದೆಹಲಿ: ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಹುಟ್ಟದಗಿಸಿದ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಬಗ್ಗೆ ಜಗತ್ತೇ ಮಾತನಾಡುತ್ತಿದ್ದು, ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಈ ಪೈಕಿ ಪಾಕಿಸ್ತಾನದ ಪ್ರತಿದಾಳಿಯ ವಿಫಲ ಯತ್ನವೂ ಒಂದು. 
ಬಾಂಬ್ ದಾಳಿ ನಡೆಸಲು ಸಜ್ಜಾಗಿದ್ದ ಮಿರಾಜ್-2000 ಫೈಟರ್ ಜೆಟ್, ಎಲ್ಒಸಿ ದಾಟುತ್ತಿದ್ದಂತೆಯೇ ಎಚ್ಚೆತ್ತ ಪಾಕಿಸ್ತಾನದ ಎಫ್-16 ಮಿರಾಜ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದವು. ಆದರೆ ಪಾಕಿಸ್ತಾನದ ಎಫ್-16 ಫೈಟರ್ ಗಳು ಮಿರಾಜ್-2000 ಮಿಂಚಿನ ವೇಗದ ತೀವ್ರತೆಗೆ ಹೆದರಿ ತನ್ನ ಸೇನಾ ನೆಲೆಗೆ ವಾಪಸ್ಸಾಗಿತ್ತು. ಈ ರೀತಿ ಪಾಕಿಸ್ತಾನದ ಎಫ್-16 ಗಳು ಭಾರತದ ಮಿರಾಜ್-2000 ಮೇಲೆ ದಾಳಿ ನಡೆಸದೇ ಹಿಮ್ಮೆಟ್ಟುವುದಕ್ಕೆ   ವಾಯುಪಡೆ ತಯಾರಿಸಿದ್ದ ಸಮರ್ಥ ಫೈಟರ್ ಜೆಟ್ ಗಳ ವ್ಯೂಹವೇ ಕಾರಣ ಎಂದು ಹೇಳಲಾಗಿತ್ತಿದೆ. ಪ್ರಾರಂಭದಲ್ಲಿ ಭಾರತದ ಫೈಟರ್ ಜೆಟ್ ಗಳ ಸಂಖ್ಯೆಯ ಬಗ್ಗೆ ನಿಖರತೆ ಇಲ್ಲದೇ ಪ್ರತಿ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಗಳ ವ್ಯೂಹದ ರಚನೆ ನೋಡಿ ದಂಗಾಗಿತ್ತಂತೆ. 
ಪಾಕಿಸ್ತಾನದ ಪ್ರತಿ ದಾಳಿ ಎದುರಿಸಲು ತಯಾರಿಗಿ ಕಾರ್ಯಾಚರಣೆ ಪ್ರಾರಾಂಭಿಸಿದ್ದ ಭಾರತ ವಾಯುಪಡೆ ಮಿರಾಜ್-2000 ಜೊತೆಗೆ ಶಕ್ತಿಶಾಲಿ ಫೈಟರ್ ಜೆಟ್ ಸುಖೋಯ್-30 ಎಂಕೆಐ ಹಾಗೂ ನೇತ್ರ ಎಇಡಬ್ಲ್ಯೂ ಆಂಡ್ ಸಿ ಹಾಗೂ ಹಿರೋನ್ ಡ್ರೋನ್ ಗಳನ್ನೂ ಬಳಸಿಕೊಂಡಿತ್ತು. ಬಾಂಬಿಂಗ್ ಕಾರ್ಯಾಚರಣೆ ವೇಳೆ ಮಿರಾಜ್-2000 ಮೇಲೆ ದಾಳಿ ನಡೆಸಲು ಯತ್ನಿಸಿದರೆ ಸುಖೋ-30 ಹಾಗೂ ಡ್ರೋಣ್ ಗಳು ಮತ್ತೊಂದು ಬದಿಯಿಂದ ಪ್ರತಿ ದಾಳಿಗೆ ಸಿದ್ಧವಾಗಿದ್ದವು. ಇದನ್ನು ಅರಿತ ಪಾಕಿಸ್ತಾನದ ಎಫ್-16 ವಿಮಾನಗಳು ಪ್ರತಿದಾಳಿ ನಡೆಸಲು ಹೆದರಿ ವಾಪಸ್ಸಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com