ಮುಧೋಳ ತಳಿ ನಾಯಿಗಳಿಗೆ ಹೆಚ್ಚಿದ ಬೇಡಿಕೆ: ಮುಗಿಬಿದ್ದು ಖರೀದಿಸುತ್ತಿರುವ ಎಸ್ಟೇಟ್ ಮಾಲಿಕರು

ಮುಧೋಳ ತಳಿಯ ನಾಯಿಗಳನ್ನು ಭಾರತೀಯ ಸೇನೆ ಹಾಗೂ ಸಿಆರ್ ಪಿಎಫ್ ಸೇರಿದಂತೆ ಅರೆಸೇನಾ ಪಡೆಗಳು ಸೇರ್ಪಡೆಗೊಳಿಸಿಕೊಂಡ ಬಳಿಕ ಈಗ ಈ ತಳಿಯ ನಾಯಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಮುಧೋಳ ತಳಿ ನಾಯಿಗಳಿಗೆ ಹೆಚ್ಚಿದ ಬೇಡಿಕೆ: ಮುಗಿಬಿದ್ದು ಖರೀದಿಸುತ್ತಿರುವ ಎಸ್ಟೇಟ್ ಮಾಲಿಕರು
ಮುಧೋಳ ತಳಿ ನಾಯಿಗಳಿಗೆ ಹೆಚ್ಚಿದ ಬೇಡಿಕೆ: ಮುಗಿಬಿದ್ದು ಖರೀದಿಸುತ್ತಿರುವ ಎಸ್ಟೇಟ್ ಮಾಲಿಕರು
ಮುಧೋಳ: ಮುಧೋಳ ತಳಿಯ ನಾಯಿಗಳನ್ನು ಭಾರತೀಯ ಸೇನೆ ಹಾಗೂ ಸಿಆರ್ ಪಿಎಫ್ ಸೇರಿದಂತೆ ಅರೆಸೇನಾ ಪಡೆಗಳು ಸೇರ್ಪಡೆಗೊಳಿಸಿಕೊಂಡ ಬಳಿಕ ಈಗ ಈ ತಳಿಯ ನಾಯಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. 
ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾಫಿ ಹಾಗೂ ಟೀ ಪ್ಲಾಂಟರ್ ಗಳು, ಎಸ್ಟೇಟ್ ನ್ನು ಹೊಂದಿರುವ ವ್ಯಕ್ತಿಗಳಿಂದ ಮುಧೋಳ ತಳಿಯ ನಾಯಿಗಳಿಗೆ ಹೆಚ್ಚು ಬೇಡಿಕೆ ಬಂದಿವೆ. 
ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದಕ್ಕೆ ಹಾಗೂ ಎಸ್ಟೇಟ್ ಗಳ ಕಾವಲಿಗೆ ಮಾಲಿಕರು ಮುಧೋಳ ತಳಿಯ ನಾಯಿಗಳಿಗೆ ಹೆಚ್ಚು ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. 
ಮುಧೋಳ ತಳಿಯ ನಾಯಿಗಳ ಆಕ್ರಮಣಕಾರಿ ಪ್ರಕೃತಿ, ಬೇಟೆಯ ಸಾಮರ್ಥ್ಯ, ಮಾಲಿಕನಿಗೆ ತೋರುವ ನಿಷ್ಠೆ ಈ ಎಲ್ಲಾ ಅಂಶಗಳೂ ಸಹ ಮುಧೋಳ ನಾಯಿಗಳಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಂಟ್ಟಿದ್ದು, ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾಗಿರುವುದೂ ಸಹ ಮಾಲಿಕರಿಗೆ ಮುಧೋಳ ನಾಯಿಗಳನ್ನು ಹೆಚ್ಚು ಹೆಚ್ಚು ಆಯ್ಕೆ ಮಾಡುವುದಕ್ಕೆ ಕಾರಣವಾಗುತ್ತಿದೆ. 
ಬಾಗಲಕೋಟೆಯ ಮುಧೋಳದಲ್ಲಿರುವ ತಿಮ್ಮಾಪುರದಲ್ಲಿನ ಸಿಆರ್ ಐಸಿ ಮುಧೋಳ ತಳಿ ಅಭಿವೃದ್ಧಿಯ ಅಧಿಕೃತ ಕೇಂದ್ರವಾಗಿದ್ದು, ಕಳೆದ 5 ವರ್ಷಗಳಲ್ಲಿ ಈ ತಳಿಗಳಿಗಾಗಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಸಿಆರ್ ಐಸಿಯ ಅಧಿಕಾರಿಗಳು  
ಈ ಕೇಂದ್ರದಿಂದ ಪ್ರತಿ ವರ್ಷವೂ 130-140 ಕ್ಕಿಂತ ಹೆಚ್ಚು ನಾಯಿಮರಿಗಳು ಮಾರಾಟವಾಗುತ್ತಿದ್ದು ಈ ಪೈಕಿ ಶೇ.60 ರಷ್ಟು ತಮಿಳುನಾಡು, ಕೇರಳದ ಎಸ್ಟೇಟ್ ಮಾಲಿಕರಾಗಿದ್ದಾರೆ. ಒಂದು ಜೊತೆ ಮುಧೋಳ ನಾಯಿಮರಿಗಳನ್ನು 19,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.  ಗಂಡು ಮರಿಗಳಿಗೆ 10,000 ರೂಪಾಯಿ ಬೆಲೆ ನಿಗದಿ ಮಾಡಿದ್ದರೆ, ಹೆಣ್ಣು ಮರಿಗಳಿಗೆ 9,000 ರೂಪಾಯಿ ನಿಗದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com