"ಭಾರತೀಯ ಜನತೆ ಚುನಾವಣೆಗಳ ಹಾದಿಯನ್ನು ನಿರ್ಧರಿಸುತ್ತಾರೆ. ಜನರ ಆಕಾಂಕ್ಷೆಗಳನ್ನು ಯಾರು ಪೂರೈಸಲು ಸಾಧ್ಯ, ಯಾರು ಅವುಗಳ ವಿರುದ್ಧ ಸಾಗುತ್ತಾರೆ ಎನ್ನುವುದು ಜನರಿಗೆ ಅರಿವಿದೆ, ಇದು ಚುನಾವಣೆಯಲ್ಲಿ ಬಹಿರಂಗವಾಗಲಿದೆ. ಬಿಜೆಪಿ ವಿರೋಧಿ ಒಕ್ಕೂಟ ಭ್ರಷ್ಟಾಚಾರ,ದ ವಿಕೇಂದ್ರೀಕರಣಕ್ಕೆ ಕೇಂದ್ರವಾಗಿದೆ ಎಂದು ಜನರು ಅರಿತಿದ್ದಾರೆ.ಅವರಲ್ಲಿ ಯಾರು ರಾಜ್ಯದ ಚುಕ್ಕಾಣಿ ಹಿಡಿದಿದ್ದರೋ ಅವರು ರಾಜ್ಯವನ್ನು ಲೂಟಿ ಹೊಡೆಇದ್ದರೆ ಕೇಂದ್ರದ ಅಧಿಕಾರ ಪಡೆದವರು ದೇಶವನ್ನು ಲೂಟಿ ಮಾಡಿದ್ದಾರೆ.ಈಗ ಅವರೆಲ್ಲರೂ ಒಟ್ಟಾಗಿ ಬರುತ್ತಿರುವಾಗ ಅವರನ್ನು ಅಧಿಕಾರಕ್ಕೆ ಏರಿಸಬೇಕೆ, ಬೇಡವೆ ಎಂದು ಜನ ನಿರ್ಧರಿಸಲಿದ್ದಾರೆ.