ಇಶ್ರಾತ್ ಜಹಾನ್ ಪ್ರಕರಣದ ಆರೋಪಿಯಾಗಿದ್ದ ಪೊಲೀಸ್ ಅಧಿಕಾರಿಗೆ ಬಡ್ತಿ!
ದೇಶ
ಇಶ್ರಾತ್ ಜಹಾನ್ ಪ್ರಕರಣದ ಆರೋಪಿಯಾಗಿದ್ದ ಪೊಲೀಸ್ ಅಧಿಕಾರಿಗೆ ಬಡ್ತಿ!
ಇಶ್ರಾತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪೊಲೀಸ್ ಅಧಿಕಾರಿಗೆ ಗುಜರಾತ್ ಸರ್ಕಾರ ಬಡ್ತಿ ನೀಡಿದೆ.
ಇಶ್ರಾತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪೊಲೀಸ್ ಅಧಿಕಾರಿಗೆ ಗುಜರಾತ್ ಸರ್ಕಾರ ಬಡ್ತಿ ನೀಡಿದೆ.
ಜಿಎಲ್ ಸಿಂಘಾಲ್ ಇಶ್ರಾತ್ ಜಹಾನ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಗಾಂಧಿ ನಗರದ ಕಮಾಂಡೋ ತರಬೇತಿ ಕೇಂದ್ರದಲ್ಲಿ ಉಪ ಇನ್ಸ್ಪೆಕ್ಟರ್ ಜನರಲ್ ಆಗಿದ್ದ ಜಿಎಲ್ ಸಿಂಘಾಲ್ ಅವರನ್ನು ಐಜಿ ಹುದ್ದೆಗೆ ಬಡ್ತಿ ನೀಡಿ ನೇಮಕ ಮಾಡಿ ಗುಜರಾತ್ ಸರ್ಕಾರ ಆದೇಶ ಹೊರಡಿಸಿದೆ.
ಅಷ್ಟೇ ಅಲ್ಲದೇ ಸೋಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಖುಲಾಸೆಯಾಗಿದ್ದ ವಿಫುಲ್ ಅಗರ್ವಾಲ್ ಅವರಿಗೂ ಸಹ ಬಡ್ತಿ ನೀಡಲಾಗಿದ್ದು, ಅಹ್ಮದಾಬಾದ್ ನ ಜಂಟಿ ಪೊಲೀಸ್ ಆಯುಕ್ತರನ್ನಾಗಿ(ಆಡಳಿತ) ನೇಮಕ ಮಾಡಲಾಗಿದೆ.
ಇಶ್ರಾತ್ ಜಹಾನ್ ಪ್ರಕರಣದಲ್ಲಿ ಸಿಂಘಾಲ್ ಅವರನ್ನು ಫೆ.2013 ರಲ್ಲಿ ಬಂಧಿಸಲಾಗಿತ್ತು. ಸಿಬಿಐ ಕೋರ್ಟ್ ನಿಂದ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ 2014 ರ ಮೇ ನಲ್ಲಿ ಅವರನ್ನು ರಾಜ್ಯ ಅಪರಾಧ ದಾಖಲಾತಿ ಬ್ಯುರೋ ಎಸ್ ಪಿ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು. ಇನ್ನು ವಿಫುಲ್ ಅಗರ್ವಾಲ್ ಅವರನ್ನು 2014 ರ ನವೆಂಬರ್ ನಲ್ಲಿ ಹುದ್ದೆಗೆ ಮರುನೇಮಕಾತಿ ಮಾಡಿಕೊಳ್ಳಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ