
ಗುರ್ ದಾಸ್ ಪುರ: 1984ರ ಸಿಖ್ ವಿರೋಧಿ ದಂಗೆ ಹಾಗೂ ರೈತರ ಸಾಲ ಮನ್ನಾ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ದೊಡ್ಡದಾಗಿ ಭರವಸೆ ನೀಡುತ್ತದೆ ಆದರೆ, ನಂತರ ಅವರನ್ನು ವಂಚಿಸುತ್ತದೆ ಎಂದು ಆರೋಪಿಸಿದರು.ಪಂಜಾಬಿನಲ್ಲೂ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ದೊಡ್ಡದಾಗಿ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ವಂಚಿಸುತ್ತಿದೆ ಎಂದರು.
1984 ರಲ್ಲಿ ಸಿಖ್ ವಿರೋಧಿ ದಂಗೆಯಲ್ಲಿ ನಂಟು ಹೊಂದಿದವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡುವ ಮೂಲಕ ಅವರಿಗೆ ಬಹುಮಾನ ನೀಡುತ್ತದೆ ಎಂದು ಹೇಳಿದರು.
ಒಂದು ಕುಟುಂಬದ ನಿರ್ದೇಶನದಂತೆ ಈ ದಂಗೆಗೆ ಸಂಬಂಧಿಸಿದ ಕಡತಗಳನೆಲ್ಲಾ ಮುಚ್ಚಿಡಲಾಗಿತ್ತು. ಆದರೆ, ಎನ್ ಡಿಎ ಅವುಗಳನೆಲ್ಲಾ ಹೊರಗೆ ತಂದಿದ್ದು, ಎಸ್ ಐಟಿ ರಚನೆ ಮಾಡಿದ್ದು, ಫಲಿತಾಂಶವನ್ನು ನಿಮ್ಮ ಮುಂದೆ ಇಟ್ಟಿದೆ ಎಂದರು.
ಕರ್ತಾಪುರ ಕಾರಿಡಾರ್ ನಿರ್ಮಾಣ ವಿಚಾರದಲ್ಲಿ ಎನ್ ಡಿಎ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುರುದಾಸ್ ಪುರದಲ್ಲಿನ ದೇರ ಬಾಬಾ ನಾನಕ್ ಮತ್ತು ಸಿಖ್ಖ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅಂತ್ಯಸಂಸ್ಕಾರವಾದ ಸ್ಥಳ ಪಾಕಿಸ್ತಾನದಲ್ಲಿನ ಕರ್ತಾಪುರದಲ್ಲಿನ ಗುರುದ್ವಾರ ದಾರ್ಬರ್ ಸಾಹಿಬ್ ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Advertisement