ಕುಂಭಮೇಳಕ್ಕೂ ಮುನ್ನ ಭಾರತೀಯ ರೈಲ್ವೆಯಿಂದ ಟ್ರೈನ್ 18 ಲೋಕಾರ್ಪಣೆ: ಪ್ರಧಾನಿ ಕಚೇರಿ ಅನುಮಾತಿ ಮಾತ್ರ ಬಾಕಿ!

ಭಾರತೀಯ ರೈಲ್ವೆ ಕುಂಭ ಮೇಳಕ್ಕೂ ಮುನ್ನ ಟ್ರೈನ್ 18 ನ್ನು ಲೋಕಾರ್ಪಣೆ ಮಾಡುವ ಇರಾದೆ ಹೊಂದಿದ್ದು, ಪ್ರಧಾನಿ ಕಚೇರಿಯಿಂದ ಅನುಮತಿಯಷ್ಟೇ ಬಾಕಿ ಇದೆ.
ಟ್ರೈನ್ 18
ಟ್ರೈನ್ 18
ಭಾರತೀಯ ರೈಲ್ವೆ ಕುಂಭ ಮೇಳಕ್ಕೂ ಮುನ್ನ ಟ್ರೈನ್ 18 ನ್ನು ಲೋಕಾರ್ಪಣೆ ಮಾಡುವ ಇರಾದೆ ಹೊಂದಿದ್ದು, ಪ್ರಧಾನಿ ಕಚೇರಿಯಿಂದ ಅನುಮತಿಯಷ್ಟೇ ಬಾಕಿ ಇದೆ. 
ಜ.14 ರಿಂದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳಕ್ಕೆ ಚಾಲನೆ ದೊರೆಯಲಿದ್ದು, ಕುಂಭಮೇಳದಿಂದ ಗಣರಾಜ್ಯೋತ್ಸವ ಆಚರಣೆಗಾಗಿ ನವದೆಹಲಿಗೆ ಪ್ರವಾಸಿ ಭಾರತೀಯ ದಿವಸ್ ನ ಪ್ರತಿನಿಧಿಗಳನ್ನು ಕರೆತರಲು ಈ ರೈಲನ್ನು ಬಳಕೆಯಾಗುವ ಸಾಧ್ಯತೆಗಳಿವೆ. 
ಟ್ರೈನ್ 18 ಪ್ರತಿ ಗಂಟೆಗೆ 200 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದ್ದು ಸಾಮಾನ್ಯವಾಗಿ 130 ಕಿ.ಮೀ ನಲ್ಲಿ ಚಾಲನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಟ್ರೈನ್ 18ನ್ನು ಉದ್ಘಾಟನೆ ಮಾಡಲಿದ್ದು ನವದೆಹಲಿಯಿಂದ-ವಾರಾಣಸಿ ನಡುವೆ ಈ ರೈಲು ಸಂಚರಿಸಲಿದೆ.  ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ರೈಲಿನ ತಪಾಸಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com