ಶಿರಡಿ ಸಾಯಿಬಾಬಾ ಮಂದಿರದಲ್ಲಿ 11 ದಿನಕ್ಕೆ ರೂ.14 ಕೋಟಿಗಿಂತಲೂ ಹೆಚ್ಚಿನ ದೇಣಿಗೆ ಸಂಗ್ರಹ!

ಡಿಸೆಂಬರ್ 22 ರಿಂದ ಸುಮಾರು 11 ದಿನಗಳ ಕಾಲ ಶಿರಡಿ ಸಾಯಿಬಾಬಾ ಮಂದಿರದಲ್ಲಿ 14.54 ಕೋಟಿ ರು ಹಣ ಸಂಗ್ರಹವಾಗಿದೆ,...
ಶಿರಡಿ ಸಾಯಿಬಾಬಾ(ಸಂಗ್ರಹ ಚಿತ್ರ)
ಶಿರಡಿ ಸಾಯಿಬಾಬಾ(ಸಂಗ್ರಹ ಚಿತ್ರ)
ಶಿರಡಿ: ಡಿಸೆಂಬರ್ 22 ರಿಂದ  ಸುಮಾರು 11 ದಿನಗಳ ಕಾಲ ಶಿರಡಿ ಸಾಯಿಬಾಬಾ ಮಂದಿರದಲ್ಲಿ 14.54 ಕೋಟಿ ರು ಹಣ ಸಂಗ್ರಹವಾಗಿದೆ,
9.5 ಲಕ್ಷ ಮಂದಿ ಭಕ್ತರು ಬಾಬಾ ದರ್ಶನ ಪಡೆದಿದ್ದು, ಕ್ರಿಸ್ ಮಸ್ ರಜೆಯ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ. 
ಸಂಗ್ರಹವಾಗಿರುವ 14.54 ಕೋಟಿ ರು ಹಣದಲ್ಲಿ ಸುಮಾರು 30 ಲಕ್ಷ ರು 18 ವಿದೇಶಿ ಸಂಸ್ಥೆಗಳಿಂದ ಬಂದ ಹಣವಾಗಿದೆ, ದೇವಾಲಯದ ಹುಂಡಿಯಲ್ಲಿ 8.5 ಕೋಟಿ ರು ಸಂಗ್ರಹವಾಗಿದ್ದು, ದೇಣಿಗೆ ಕೌಂಟರ್ ನಲ್ಲಿ 3 ಕೋಟಿ ರು  ಹಾಗೂ 3ಕೋಟಿ ರು. ಡಿಡಿ ಮೂಲಕ ಬಂದಿದೆ, ಕೆಲವರು ಚೆಕ್ ಮತ್ತು ಡೆಬಿಟ್ ಕಾರ್ಡ್ ಮೂಲಕ ನೀಡಿದ್ದಾರೆ.
ಹಣದ ಹೊರತಾಗಿ ಸುಮಾರು 507 ಗ್ರಾಂ ಚಿನ್ನ ಹಾಗೂ 16 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com