ಈಗ ಜ.14 ರಿಂದ ಅಗಸ್ತ್ಯಕೂಡಂ ಶಿಖರಕ್ಕೆ 41 ದಿನಗಳ ಟ್ರೆಕ್ಕಿಂಗ್ ಪ್ರಾರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರೂ ಸಹ ಅಲ್ಲಿಗೆ ತೆರಳಲಿದ್ದಾರೆ. ಈ ವರೆಗೆ ಮಹಿಳೆಯರ ಪ್ರವೇಶವನ್ನು ಇಲ್ಲಿಗೆ ನಿರ್ಬಂಧಿಸಲಾಗಿತ್ತು. ಸುಮಾರು 1,868 ಮೀಟರ್ ಉತ್ತುಂಗವಿರುವ ಅಗಸ್ತ್ಯ ಶಿಖರ ತಿರುವನಂತಪುರಂ ಜಿಲ್ಲೆಯ ನೆಯ್ಯರ್ ವನ್ಯಜೀವಿ ಧಾಮದ ವ್ಯಾಪ್ತಿಗೆ ಬರುತ್ತದೆ. 2018 ರ ನವೆಂಬರ್ ತಿಂಗಳಲ್ಲಿ ಕೇರಳ ಹೈಕೋರ್ಟ್ ಅಗಸ್ತ್ಯಕೂಡಂ ಶಿಖರಕ್ಕೂ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೀರ್ಪು ಪ್ರಕಟಿಸಿತ್ತು.