ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರದ ಅಪಕ್ವ ನಡೆಯನ್ನು ಸ್ವಾಗತಿಸಿದ ಮಾಯಾವತಿ
ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರದ ಅಪಕ್ವ ನಡೆಯನ್ನು ಸ್ವಾಗತಿಸಿದ ಮಾಯಾವತಿ

ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರದ ಅಪಕ್ವ ನಡೆಯನ್ನು ಸ್ವಾಗತಿಸಿದ ಮಾಯಾವತಿ

ಮೇಲ್ವರ್ಗದ ಜನರಿಗೂ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಡೆಯನ್ನು ಅಪಕ್ವವಾದದ್ದು ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.
Published on
ನವದೆಹಲಿ: ಮೇಲ್ವರ್ಗದ ಜನರಿಗೂ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಡೆಯನ್ನು ಅಪಕ್ವವಾದದ್ದು ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ. 
ಕೇಂದ್ರ ಸರ್ಕಾರದ ನಿರ್ಣಯವನ್ನು ಚುನಾವಣಾ ಗಿಮಿಕ್ ಎಂದಿರುವ ಉತ್ತರ ಪ್ರದೇಶದ ಮಾಜಿ ಸಿಎಂ, ಅಪಕ್ವವಾದ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.  ಮೇಲ್ವರ್ಗದ ಜನರಿಗೂ ಶೇ.10 ರಷ್ಟು ಮೀಸಲಾತಿ ನೀಡಬೇಕೆಂಬುದು ಬಿಎಸ್ ಪಿಯ ಬೇಡಿಕೆಯೂ ಆಗಿತ್ತು. ಈಗ ಬಿಜೆಪಿ ಜಾರಿಗೆ ತಂದಿರುವುದು ಚುನವಣಾ ಗಿಮಿಕ್ ಆದರೂ ಅದನ್ನು ಸ್ವಾಗತಿಸುವುದಾಗಿ ಮಾಯಾವತಿ ಹೇಳಿದ್ದಾರೆ. 
ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರಿಗೆ ಹಾಗೂ ಅಲ್ಪಸಂಖ್ಯಾತರಿಗೂ ಮೀಸಲಾತಿ ನೀಡಬೇಕೆಂದು ಬಿಎಸ್ ಪಿ ಆಗ್ರಹಿಸುತ್ತಿದೆ. ಆದರೆ ಈ ವಿಷಯದಲ್ಲಿ ಬಿಜೆಪಿ ನ್ಯಾಯ ಒದಗಿಸಿಲ್ಲ ಇದು ಖಂಡನಾರ್ಹ ಎಂದು ಮಾಯಾವತಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com