ಆರ್‌ಬಿಐ 'ಡಿಜಿಟಲ್ ಪಾವತಿ' ವಿಶೇಷ ಸಮಿತಿಯ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ!

ಆಧಾರ್ ಯೋಜನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಂದನ್ ನಿಲೇಕಣಿ ಅವರನ್ನು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಂದನ್ ನಿಲೇಕಣಿ
ನಂದನ್ ನಿಲೇಕಣಿ
Updated on
ಮುಂಬೈ: ಆಧಾರ್ ಯೋಜನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಂದನ್ ನಿಲೇಕಣಿ ಅವರನ್ನು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 
ನೂತನ ಯೋಜನೆಗಳು, ಡಿಜಿಟಲ್ ಪಾವತಿಯ ಸಾಧಕ-ಬಾಧಕಗಳು, ಡಿಜಿಟಲ್ ಪಾವತಿಯ ಭದ್ರತೆ ಬಗ್ಗೆ ಈ ವಿಶೇಷ ಸಮಿತಿ ಆಳವಾಗಿ ಅಧ್ಯಯನ ಮಾಡಲಿದೆ. ಡಿಜಿಟಲ್ ಪಾವತಿ ಕುರಿತಂತೆ ಸಲಹೆ ಸೂಚನೆಗಳನ್ನು ಈ ಸಮಿತಿ ನೀಡಲಿದೆ. 
ಈ ವಿಶೇಷ ಸಮಿತಿಯಲ್ಲಿ ನಾಲ್ವರು ಸದಸ್ಯರಿರಲಿದ್ದಾರೆ. ಸಮಿತಿಯ ಸದಸ್ಯರಾಗಿ ಎಚ್ ಆರ್ ಖಾನ್, ಕಿಶೋರ್ ಸಾಂಸಿ, ಅರುಣಾ ಶರ್ಮಾ, ಸಂಜಯ್ ಜೈನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com