ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಭಾರತೀಯ ಸೇನಾ ಯೋಧ, ಬಂಧನ

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ತೋಡಿದ್ದ ಹನಿಟ್ರ್ಯಾಪ್ ಖೆಡ್ಡಾಗೆ ಭಾರತೀಯ ಸೇನಾ ಯೋಧ ಬಲಿಯಾಗಿದ್ದು, ಆತನನ್ನು ರಾಜಸ್ಥಾನ ಪೊಲೀಸರು ಗೂಢಚಾರಿಕೆ ಆರೋಪದಡಿ ಬಂಧಿಸಿದ್ದಾರೆ.
ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಭಾರತೀಯ ಸೇನಾ ಯೋಧ, ಬಂಧನ
ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಭಾರತೀಯ ಸೇನಾ ಯೋಧ, ಬಂಧನ
ನವದೆಹಲಿ: ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ತೋಡಿದ್ದ ಹನಿಟ್ರ್ಯಾಪ್ ಖೆಡ್ಡಾಗೆ ಭಾರತೀಯ ಸೇನಾ ಯೋಧ ಬಲಿಯಾಗಿದ್ದು, ಆತನನ್ನು ರಾಜಸ್ಥಾನ ಪೊಲೀಸರು ಗೂಢಚಾರಿಕೆ ಆರೋಪದಡಿ ಬಂಧಿಸಿದ್ದಾರೆ. 
ಜೈಸಲ್ಮೇರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಯೋಧ ಸೋಮ್ ಬೀರ್, ಹನಿ ಟ್ರ್ಯಾಪ್ ಗೆ ಒಳಗಾಗಿ ಪಾಕಿಸ್ತಾನದ ಐಎಸ್ಐ ಗೆ ಭಾರತೀಯ ಸೇನೆಯ ಕುರಿತಾದ ಮಹತ್ವದ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ. ಆತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆಗೆ ಸೇನೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. 
ಆರ್ಮರ್ಡ್ ಕಾರ್ಪ್ಸ್ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಯೋಧ ಸೋಮ್ ಬೀರ್, ಫೇಸ್ ಬುಕ್ ನಲ್ಲಿ ಅಂಕಿತಾ ಚೋಪ್ರಾ ಎಂಬ ಹೆಸರಿನಲ್ಲಿ ಐಎಸ್ಐ ನ  ಗೂಢಚಾರಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನ ಫೇಕ್ ಪ್ರೊಫೈಲ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ, ಐಎಸ್ಐ ನ ಫೇಕ್ ಫೇಸ್ ಬುಕ್ ಖಾತೆಯೊಂದಿಗೆ ನಿರತರ ಚಾಟ್ ಮಾಡುತ್ತಿದ್ದ ಯೋಧ ಸೋಮ್ ಬೀರ್, ಸೇನಾ ಶಸ್ತ್ರಸಜ್ಜಿತ ಪಡೆ ಹಾಗೂ ಅದರ ಚಲನವಲನಗಳ ಬಗ್ಗೆ ವಿವರವಾಗಿ ಹೇಳುತ್ತಿದ್ದ ಎಂದು ತಿಳಿದುಬಂದಿದೆ.  ಯೋಧನ ಬಂಧನ ಪ್ರಕರಣ ಇದೇ ಮಾದರಿಯಲ್ಲಿ ಬೇರೆ ಯಾರಾದರೂ ಯೋಧರು, ಅಧಿಕಾರಿಗಳು ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಸಹಕಾರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com