ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಜಾಧವ್ ಪುರ ವಿವಿ ಪ್ರೊಫೆಸರ್ ಕರ್ತವ್ಯ ನಿರ್ವಹಣೆಗೆ ನಿರ್ಬಂಧ

ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಜಾಧವ್ ಪುರ ವಿವಿಯ ಪ್ರೊಫೆಸರ್ ನ್ನು ಕರ್ತವ್ಯ ನಿರ್ವಹಣೆಯಿಂದ ತೆಗೆದುಹಾಕಲಾಗಿದೆ.
ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಜಾಧವ್ ಪುರ ವಿವಿ ಪ್ರೊಫೆಸರ್ ಕರ್ತವ್ಯ ನಿರ್ವಹಣೆಗೆ ನಿರ್ಬಂಧ
ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಜಾಧವ್ ಪುರ ವಿವಿ ಪ್ರೊಫೆಸರ್ ಕರ್ತವ್ಯ ನಿರ್ವಹಣೆಗೆ ನಿರ್ಬಂಧ
ಕೋಲ್ಕತ್ತಾ: ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಜಾಧವ್ ಪುರ ವಿವಿಯ ಪ್ರೊಫೆಸರ್ ನ್ನು ಕರ್ತವ್ಯ ನಿರ್ವಹಣೆಯಿಂದ ತೆಗೆದುಹಾಕಲಾಗಿದೆ. 
ವಿವಿಯ ಸ್ಟೂಡೆಂಟ್-ಟೀಚರ್ ಸಮಿತಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಪ್ರೊಫೆಸರ್ ಕರ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವಿವಿಯ ಹೇಳಿಕೆ ತಿಳಿಸಿದ್ದು ಕ್ಯಾಂಪಸ್ ಒಳಗೆ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. 
ಯುವತಿಯರ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿದ್ದ ಪ್ರೊಫೆಸರ್, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ತಕ್ಷಣವೇ ಅದನ್ನು ಡಿಲೀಟ್ ಮಾಡಿದ್ದರಾದರೂ ಅದರ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು. 
ಪ್ರೊಫೆಸರ್ ಫೇಸ್ ಬುಕ್ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಜಾಧವ್ ಪುರ ವಿವಿ ಉಪಕುಲಪತಿ ಸುರಂಜನ್ ದಾಸ್, "ಅವರೊಬ್ಬ ಪ್ರೊಫೆಸರ್, ಅವರ ಫೇಸ್ ಬುಕ್ ಪೋಸ್ಟ್ ವಿವಿಯ ಘನತೆಯನ್ನು ಕುಗ್ಗಿಸಿದೆ. ನಿಯಮಗಳ ಪ್ರಕರ  ಪ್ರೊಫೆಸರ್ ಕನಕ್ ಸರ್ಕಾರ್ ವಿರುದ್ಧ ಕ್ರಮ ಕೈಗೊಳ್ಳುತ್ತೆವೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com