ಪತ್ರಕರ್ತನ ಹತ್ಯೆ ಪ್ರಕರಣ: ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ

ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವವರಿಗೆ ಜೀವಾವಧಿ ಶಿಕ್ಷೆ ಯಾಗಿದೆ.
ಡೇರಾ ಮುಖ್ಯಸ್ಥ ರಾಮ್ ರಹೀಮ್
ಡೇರಾ ಮುಖ್ಯಸ್ಥ ರಾಮ್ ರಹೀಮ್
Updated on
ನವದೆಹಲಿ:  ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವವರಿಗೆ ಜೀವಾವಧಿ ಶಿಕ್ಷೆ ಯಾಗಿದೆ. ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಮ್ ಸಿಂಗ್ ಹಾಗೂ ಇತರೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯ ರೂ 50,000 ದಂಡವನ್ನು ವಿಧಿಸಿದೆ.
ಇದಕ್ಕೆ ಮುನ್ನ  ಜನವರಿ 11ರಂದು ನ್ಯಾಯಾಲಯವು ಕೊಲೆ ಮತ್ತು ಪಿತೂರಿಗಳಿಗೆ ಸಂಬಂಧಿಸಿದಂತೆ ಗುರ್ಮೆತ್ ರಾಮ್ ರಹೀಮ್ ಸಿಂಗ್  ಹಾಗೂ ಮೂವರು ಆರೋಪಿಗಳೆಂದು ನ್ಯಾಯಾಲಯ ಘೋಷಿಸಿತ್ತು.
2002ರಲ್ಲಿ ಹರಿಯಾಣದ ಸಿರ್ಸಾ ನಗರದಲ್ಲಿ ಪತ್ರಕರ್ತ ರಾಮ್ ಚಂದರ್ ಛಠರ್ಪತಿ ಹತ್ಯ್ತೆ ನಡೆದಿತ್ತು. ಛಠರ್ಪತಿ ತಮ್ಮ ಪತ್ರಿಕೆ "ಪೂರಾ ಸಚ್" ನಲ್ಲಿ ರಾಮ್ ರಹೀಮ್ ಸಿಂಗ್  ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ವರದಿ ಪ್ರಕ್ಟಿಸಿದ ಬೆನ್ನಲ್ಲಿಯೇ ಈ ಕೊಲೆಯಾಗಿತ್ತು.
ಇದಾಗಲೇ ಇನ್ನೊಂದು ಪ್ರಕರಣದಲ್ಲಿ 20 ವರ್ಷಗಳ ಅವಧಿಕ್ಜೈಲುಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಮ್ ಸಿಂಗ್ ಅವರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಸಿಬಿಐ ಅನುಮತಿಸಿತ್ತು.2017ರಲ್ಲಿ ಅವರ ಬಂಧನವಾಗಿದ್ದಾಗ ಪಂಚಕುಲ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಸಂಭವಿಸಿದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಒಪ್ಪಿಕೊಳ್ಳಲಾಗಿದೆ.
ಕೃಷನ್ ಲಾಲ್, ಕುಲ್ದೀಪ್ ಸಿಂಗ್ ಮತ್ತು ನಿರ್ಮಲ್ ಸಿಂಗ್ ಜತೆಗೆ ಇತರೆ ಮೂವರು ಆರೋಪಿಗಳಾದ ಕೃಷನ್ ಲಾಲ್, ಕುಲ್ದೀಪ್ ಸಿಂಗ್ ಮತ್ತು ನಿರ್ಮಲ್ ಸಿಂಗ್ ಸಹ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com