ಅಮಿತ್ ಶಾ
ಅಮಿತ್ ಶಾ

ಪ್ರತಿಪಕ್ಷಗಳು ಕೋಲ್ಕತಾ ರ್ಯಾಲಿಯಲ್ಲಿ 'ಭಾರತ್ ಮಾತಾ ಕಿ ಜೈ' ಹೇಳಿಲ್ಲ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೋಲ್ಕತಾದಲ್ಲಿ ನಡೆದ ಮಹಾಘಟಬಂಧನ್...
ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೋಲ್ಕತಾದಲ್ಲಿ ನಡೆದ ಮಹಾಘಟಬಂಧನ್ ರ್ಯಾಲಿಯಲ್ಲಿ ಒಂದೇ ಒಂದು ಸಲ 'ಭಾರತ್ ಮಾತಾ ಕಿ ಜೈ' ಹೇಳಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಮಾಲ್ಡಾದಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪೌರತ್ವ ಮಸೂದೆ ಅಂಗೀಕರಿಸುವುದರೊಂದಿಗೆ ಬೆಂಗಾಳಿ ನಿರಾಶ್ರಿತರಿಗೆ ಪೌರತ್ವ ನೀಡಲಾಗುವುದು ಎಂದು ಹೇಳಿದರು.
ಪೌರತ್ವ ಮಸೂದೆ ಅಡಿ ಎಲ್ಲಾ ಬೆಂಗಾಲಿ ನಿರಾಶ್ರಿತರಿಗೆ ಪೌರತ್ವ ನೀಡುತ್ತೇವೆ ಎಂಬ ಭರವಸೆಯನ್ನು ನಾನು ನೀಡುತ್ತಿದ್ದೇನೆ. ನಿರಾಶ್ರಿತರಿಗಾಗಿ ಟಿಎಂಸಿ ಸರ್ಕಾರ ಏನನ್ನೂ ಮಾಡಿಲ್ಲ. ಆದರೆ ನಾವು ಅವರಿಗೆ ಪೌರತ್ವ ನೀಡುತ್ತೇವೆ ಎಂದರು.
ಇದೇ ವೇಳೆ, ಇತ್ತೀಚಿಗೆ ಕೋಲ್ಕತಾದಲ್ಲಿ ನಡೆದ ಪ್ರತಿಪಕ್ಷಗಳ ಮಹಾ ರ್ಯಾಲಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಬಿಜೆಪಿ ವಿರೋಧಿ ಪಕ್ಷಗಳು ರ್ಯಾಲಿಯಲ್ಲಿ ಒಂದೇ ಒಂದು ಸಲ ಭಾರತ್ ಮಾತಾ ಕಿ ಜೈ ಅಥವಾ ವಂದೇ ಮಾತರಂ ಹೇಳಲಿಲ್ಲ. ಆದರೆ ಮೋದಿ ಮೋದಿ ಎಂಬ ಘೋಷಣೆ ಕೂಗುವುದನ್ನು ಮರೆಯಲಿಲ್ಲ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷಗಳು ಅಧಿಕಾರಕ್ಕಾಗಿ ಮತ್ತು ಸ್ವಹಿತಾಸಕ್ತಿಗಾಗಿ ಮಹಾಘಟಬಂಧನ್ ರಚನೆ ಮಾಡಿಕೊಂಡಿವೆ ಎಂದು ಬಿಜೆಪಿ ಅಧ್ಯಕ್ಷ ಆರೋಪಿಸಿದರು.

Related Stories

No stories found.

Advertisement

X
Kannada Prabha
www.kannadaprabha.com