ಪ್ರಿಯಾಂಕಾ ಅತ್ಯಂತ ಸಮರ್ಥ ವ್ಯಕ್ತಿ, ನನಗೆ ಸಹಾಯ ಮಾಡುತ್ತಾರೆ: ರಾಹುಲ್ ಗಾಂಧಿ

ಸಕ್ರಿಯ ರಾಜಕಾರಣಕ್ಕೆ ಸಹೋದರಿ ಪ್ರಿಯಾಂಕ ವಾಧ್ರ ಪ್ರವೇಶಿಸಿರುವುದನ್ನು ಸ್ವಾಗತಿಸಿರುವ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದರಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕ ವಾಧ್ರ- ರಾಹುಲ್ ಗಾಂಧಿ
ಪ್ರಿಯಾಂಕ ವಾಧ್ರ- ರಾಹುಲ್ ಗಾಂಧಿ
ನವದೆಹಲಿ: ಸಕ್ರಿಯ ರಾಜಕಾರಣಕ್ಕೆ ಸಹೋದರಿ ಪ್ರಿಯಾಂಕ ವಾಧ್ರ ಪ್ರವೇಶಿಸಿರುವುದನ್ನು ಸ್ವಾಗತಿಸಿರುವ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದರಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ. 
ಪ್ರಿಯಾಂಕ ಗಾಂಧಿ ಅತ್ಯಂತ ಸಮರ್ಥ ವ್ಯಕ್ತಿಯಾಗಿದ್ದಾರೆ ಆಕೆ 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನನಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಜ್ಯೋತಿರಾಧಿತ್ಯ ಸಿಂಧಿಯಾ ಬಗ್ಗೆಯೂ ಮಾತನಾಡಿರುವ ರಾಹುಲ್ ಗಾಂಧಿ, ಜ್ಯೋತಿರಾಧಿತ್ಯ ಸಂಧಿಯಾ ಸಹ ಡೈನಮಿಕ್ ಯುವ ನಾಯಕ ಎಂದು ಬಣ್ಣಿಸಿದ್ದಾರೆ. 
ಉತ್ತರ ಪ್ರದೇಶವಾಗಲೀ, ಗುಜರಾತ್ ಆಗಲೀ ನಾವು ಮುಂದಾಳತ್ವ ವಹಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ್ನು ದೂರವಿಟ್ಟು ಎಸ್ ಪಿ-ಬಿಎಸ್ ಪಿ ಮೈತ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಎಸ್ ಪಿ-ಬಿಎಸ್ ಪಿ ಮೈತ್ರಿ ಮಾಡಿಕೊಂಡಿವೆ  ಅವರ ವಿರುದ್ಧ ನಮಗೆ ಬೇಸರವಿಲ್ಲ, ನಾನು ಕಾಂಗ್ರೆಸ್ ಸಿದ್ಧಾಂತವನ್ನು ಮುನ್ನೆಲೆಗೆ ತರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com