ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ಪೊಲೀಸ್ ಹೆಲ್ಪ್ ಲೈನ್

ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ರಾಜಸ್ಥಾನ ಪೊಲೀಸ್ ಹೆಲ್ಪ್ ಲೈನ್ ನಂಬರ್ ತೆರೆದಿದ್ದಾರೆ.
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ಪೊಲೀಸ್ ಹೆಲ್ಪ್ ಲೈನ್
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ಪೊಲೀಸ್ ಹೆಲ್ಪ್ ಲೈನ್
ಜೋಧ್ ಪುರ: ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ಜೋಡಿಗಳ ರಕ್ಷಣೆಗೆ ರಾಜಸ್ಥಾನ ಪೊಲೀಸ್ ಹೆಲ್ಪ್ ಲೈನ್ ನಂಬರ್ ತೆರೆದಿದ್ದಾರೆ. 
ಹೈಕೋರ್ಟ್ ಆದೇಶದ ಅನುಸಾರವಾಗಿ ನಾಗರಿಕ ಹಕ್ಕುಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಂಗ ಶ್ರೀನಿವಾಸ್ ರಾವ್ ಸುತ್ತೋಲೆ ಹೊರಡಿಸಿದ್ದು, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಂದ ಬೆದರಿಕೆ ಎದುರಿಸುತ್ತಿರುವ ಜೋಡಿಗಳಿಗೆ ಭದ್ರತೆ ನೀಡುವುದಕ್ಕೆ ಎಲ್ಲಾ ಎಸ್ ಪಿ ಹಾಗೂ ಪೊಲೀಸ್ ಆಯುಕ್ತರುಗಳಿಗೆ ಸೂಚನೆ ನೀಡಿದ್ದಾರೆ. 
8764871150  ಹೆಲ್ಪ್ ಲೈನ್ ನಂಬರ್ ಆಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com