ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ

ಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈಗ ಅಂಥಹದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ.
ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ:  ನಿತಿನ್ ಗಡ್ಕರಿ
ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ
Updated on
ನಾಗ್ಪುರ: ಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈಗ ಅಂಥಹದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ. 
ಸಾರ್ವಜನಿಕರಿಗೆ ಕನಸುಗಳನ್ನು ಕಟ್ಟಿಕೊಡುವ ರೀತಿಯಲ್ಲಿ ಭರವಸೆ ನೀಡಿ ಅದನ್ನು ಈಡೇರಿಸುವಲ್ಲಿ ವಿಫಲವಾದರೆ ಅವರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತದೆ ಎಂಬ ಅರ್ಥದಲ್ಲಿ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಗಳು ಎಂದಿಗೂ ಈಡೇರಿಸಬಹುದಾದ ಕನಸುಗಳನ್ನು ಮಾತ್ರ ಜನರಿಗೆ ತೋರಿಸಬೇಕು ಎಂದು ಹೇಳಿದ್ದು ನಾನು ಜನರಲ್ಲಿ ಸುಮ್ಮನೆ ಕನಸುಗಳನ್ನು ಬಿತ್ತುವವರ ಪೈಕಿ ಅಲ್ಲ, ನಾನು ಸಾಧ್ಯವಾಗುವುದನ್ನು ಮಾತ್ರವೇ ಹೇಳುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ. 
ಜನರು ತಮಗೆ ಭಾರಿ ಆಸೆಗಳನ್ನು ತೋರಿಸುವ ನಾಯಕರನ್ನು ಇಷ್ಟಪಡುತ್ತಾರೆ, ಆದರೆ ಅದೇ ನಾಯಕ ಅದನ್ನು ಈಡೇರಿಸುವಲ್ಲಿ ವಿಫಲವಾದರೆ, ಜನರ ಆಕ್ರೋಶಕ್ಕೆ ಆ ನಾಯಕ ಗುರಿಯಾಗಬೇಕಾಗುತ್ತದೆ. ಇದೇ ಕಾರಣದಿಂದಲೇ ಕನಸನ್ನು ನನಸಾಗಿಸಬಹುದಾದ ಭರವಸೆಗಳನ್ನಷ್ಟೇ ನಾವು ಜನರಿಗೆ ನೀಡಬೇಕೆಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್ ನಾಯಕಿ ಇಶಾ ಕೊಪ್ಪಿಕರ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳುವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಮಾತನಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com