ಮನ್ ಕೀ ಬಾತ್ ನಲ್ಲಿ ಸಿದ್ದಗಂಗಾ ಶ್ರಿಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದರು, ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಬಸವಣ್ಣನನರ ಮಾರ್ಗದಲ್ಲಿ ಸಾಗಿದರು ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದರು,  ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಬಸವಣ್ಣನನರ ಮಾರ್ಗದಲ್ಲಿ ಸಾಗಿದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
2019ನೇ ಇಸವಿಯಲ್ಲಿ ಮೊದಲನೆ ಬಾರಿಗೆ  ರೇಡಿಯೋ ಕಾರ್ಯಕ್ರಮ  ಮನ್  ಕೀ ಬಾತ್ ನಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನವರಿ ತಿಂಗಳಲ್ಲಿ ನಾವು ಒಂದು ಕೆಟ್ಟ ಸುದ್ದಿ ಕೇಳಿದೆವು, ಅದು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ 111 ವರ್ಷ ಸಿದ್ದಗಂಗಾ ಶ್ರಿಗಳು ನಿಧನರಾಗಿದ್ದು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಸಾವಿರಾರು ಮಂದಿಗೆ ಶಿಕ್ಷಣ, ಊಟ ವಸತಿ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಚುನಾವಣಾ ಆಯೋಗ ವ್ಯವಸ್ಥಿತ ವಾಗಿ ಚುನಾವಣೆ ನಡೆಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ, 
ಇನ್ನೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬದ ಅಂಗವಾಗಿ ಜನವರಿ 23 ರಂದು ಅವರ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.ಸಾರ್ವಜನಿಕರ ಒತ್ತಾಯವನ್ನು ಪೂರ್ಣಗೊಳಿಸಿದ್ದು ಸಂತೋಷ ತಂದಿದೆ ಎಂದು ಹೇಳಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com