ಗೌಹಾಟಿ: 2008ರಲ್ಲಿ ನಡೆದ ಅಸ್ಸಾಂನ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬೋಡೋಲ್ಯಾಂಡ್ ನ ನ್ಯಾಶನಲ್ ಡೆಮೋಕ್ರಾಟಿಕ್ ಫ್ರಂಟ್ ( ಎನ್ ಡಿಎಫ್ ಬಿ) ರಂಜನ್ ದೈಮರಿ ಹಾಗೂ ಇತರೆ 14 ಮಂದಿ ದೋಷಿಗಳಾಗಿದ್ದಾರೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಆರೋಪಿಗಳಿಗೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೊಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ. ಬುಧವಾರ ಶಿಕ್ಷೆ ಪ್ರಮಾಣ ಘೋಷಣೆಯಾಗಲಿದೆ.
ದೈಮರಿ ಹಾಗೂ ಇತರರು 2008ರ ಅಕ್ಟೋಬರ್ 30ರಂದು ಗೌಹಾಟಿ ಕೊಕ್ರಝಾರ್, ಬೊಂಗೈಗಾನ್ ಮತ್ತು ಬರ್ಪೇಟಾದಲ್ಲಿ ಸರಣಿ ಸ್ಪೋಟಗಳನ್ನು ನಡೆಸಿದ್ದರು. ಇದರಲ್ಲಿ 88 ಜನ ಸಾವನ್ನಪ್ಪಿದ್ದು 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಎನ್ ಡಿಎಫ್ ಬಿ ಉಗ್ರ ಸಂಘಟನೆ ಈ ಕೃತ್ಯ ಎಸಗಿತ್ತು.