ಉನಾ: ಒನ್ ರ್ಯಾಂಕ್ ಒನ್ ಪೆನ್ಷನ್(ಒಆರ್ ಒಪಿ)ಗೆ ಹೊಸ ವ್ಯಾಖ್ಯಾನ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಒಆರ್ ಒಪಿ ಎಂದರೆ ಓನ್ಲಿ ರಾಹುಲ್ ಓನ್ಲಿ ಪ್ರಿಯಾಂಕಾ ಎಂದು ಸೋಮವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಹಿಮಾಚಲ ಪ್ರದೇಶದ ಉನಾದಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ಮೋದಿ ಅವರು ಯೋಧರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ ನೀಡಿದರು. ಆದರೆ ಕಾಂಗ್ರೆಸ್ ನೀಡಿದ್ದು ಓನ್ಲಿ ರಾಹುಲ್ ಓನ್ಲಿ ಪ್ರಿಯಾಂಕಾ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಒನ್ ರ್ಯಾಂಕ್ ಒನ್ ಪೆನ್ಷನ್ ಭರವಸೆಯನ್ನ ಈಡೇರಿಸಿದೆ. ಮೋದಿ ಯೋಧರಿಗೆ ಓಆರ್ಓಪಿ ನೀಡಿದರೆ, ಕಾಂಗ್ರೆಸ್ ನೀಡಿರೋದು ‘ಓನ್ಲಿ ರಾಹುಲ್ ಓನ್ಲಿ ಪ್ರಿಯಾಂಕಾ’ಎಂದರು.
ಕಾಂಗ್ರೆಸ್ ಇತ್ತೀಚಿಗೆ ಬಡತನ ವಿಷಯವನ್ನು ಹೆಚ್ಚಾಗಿ ಪ್ರಸ್ತಾಪಿಸುತ್ತಿದೆ. ಆದರೆ ಕಾಂಗ್ರೆಸ್ ಹಲವು ದಶಕಗಳಿಂದ ಬಡವರಿಗಾಗಿ ಏನು ಮಾಡಿದೆ ಎಂದು ನಾನು ರಾಹುಲ್ ಬಾಬಾ ಅವರನ್ನು ಕೇಳುತ್ತಿದ್ದೇನೆ ಎಂದರು.