ಅಲಿಗಡ: ಮಾಜಿ ಕ್ರಿಕೆಟಿಗ ನವಜೋತ್ ಸಿಧು, ನಟರಾದ ಅಮೀರ್ ಖಾನ್ ಮತ್ತು ನಾಸಿರುದ್ದೀನ್ ಶಾ ದೇಶದ್ರೇಹಿಗಳು ಎಂದು ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್ ಲೇವಡಿ ಮಾಡಿದ್ದಾರೆ..ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಭಯೋತ್ಪಾದಕ ಅಜ್ಮಲ್ ಕಸಬ್, ಅವರಂಥ ಮುಸ್ಲಿಮರು ಬೇಡ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಂಥ ಮುಸ್ಲಿಮರು ಬೇಕು ಎಂದು ಹೇಳಿದ್ದಾರೆ,.ಭಾರತಕ್ಕೆ ಕಸಬ್, ಯಾಕೂಬ್, ಇಷ್ರತ್ ಜಹಾನ್ ಅವರಂಥ ದೇಶ ದ್ರೋಹಿಗಳು ಬೇಕಿಲ್ಲ.,ದೇಶವನ್ನು ಉತ್ತಮ ಮಾರ್ಗಕ್ಕೆ ಕರೆದೊಯ್ಯುವವರ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ..ನಾಸಿರುದ್ದೀನ್ ಶಾ, ಅಮಿರ್ ಖಾನ್ ಒಳ್ಳೆಯ ನಟ ಇರಬಹುದು, ಆದರೆ ಅವರು ಗೌರವಕ್ಕೆ ಯೋಗ್ಯರಲ್ಲ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos