ಸಿಯಾಚಿನ್ ನಲ್ಲಿ ದೇಶದ ಯಾವುದೇ ರಕ್ಷಣಾ ಮಂತ್ರಿಗೆ ಸಾಧ್ಯವಾಗದ್ದನ್ನು ಸಾಧಿಸಿದ್ದ ಜಾರ್ಜ್ ಫರ್ನಾಂಡೀಸ್!

ಭೌತಿಕವಾಗಿ ಇಷ್ಟು ದಿನ ಜೀವಂತವಾಗಿದ್ದ ದೇಶದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನು ನೆನಪಾಗಿ ಮಾತ್ರ ಉಳಿಯಲಿದ್ದಾರೆ.
ಸಿಯಾಚಿನ್ ನಲ್ಲಿ ದೇಶದ ಯಾವುದೇ ರಕ್ಷಣಾ ಮಂತ್ರಿಗೆ ಸಾಧ್ಯವಾಗದ್ದನ್ನು ಸಾಧಿಸಿದ್ದ ಜಾರ್ಜ್!
ಸಿಯಾಚಿನ್ ನಲ್ಲಿ ದೇಶದ ಯಾವುದೇ ರಕ್ಷಣಾ ಮಂತ್ರಿಗೆ ಸಾಧ್ಯವಾಗದ್ದನ್ನು ಸಾಧಿಸಿದ್ದ ಜಾರ್ಜ್!
ನವದೆಹಲಿ: ಭೌತಿಕವಾಗಿ ಇಷ್ಟು ದಿನ ಜೀವಂತವಾಗಿದ್ದ ದೇಶದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನು ನೆನಪಾಗಿ ಮಾತ್ರ ಉಳಿಯಲಿದ್ದಾರೆ.  ಕಾರ್ಮಿಕ ಹೋರಾಟದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರಾಗಿದ್ದರಾದರೂ, ಜಾರ್ಜ್ ಫರ್ನಾಂಡೀಸ್ ಜನಸಾಮಾನ್ಯರಿಗೆ ಆತ್ಮೀಯವಾಗುವುದು ರಕ್ಷಣಾ ಸಚಿವರಾಗಿ ಕೈಗೊಂಡ ಕೆಲಸಗಳಿಂದ. ಅಂತಹ ಒಂದು ಅಚ್ಚಳಿಯದ ನೆನಪು ಸಿಯಾಚಿನ್ ಪ್ರದೇಶ-ಜಾರ್ಜ್ ಫರ್ನಾಂಡಿಸ್ ನಡುವೆ ಬೆಸೆದುಕೊಂಡಿದೆ. 
ಚಳಿಗಾಲದಲ್ಲಿ ಸಿಯಾಚಿನ್ ನ ವಿಷಮ ಸ್ಥಿತಿಯ ಸೈನಿಕರಿಗಷ್ಟೇ ಗೊತ್ತು. ರಕ್ಷಣಾ ಸಚಿವರಾಗಿದ್ದಾಗ ಅಂತಹ ಕಠಿಣ ಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡಿ ಬರುತ್ತಿದ್ದವರು ಜಾರ್ಜ್ ಫರ್ನಾಂಡೀಸ್. ಪ್ರತಿ 6  ತಿಂಗಳಿಗೆ ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸುವ ಯೂನಿಟ್ ಗಳು ಬದಲಾಗುವುದು ನಿಯಮ. ಹೀಗೆ ಪ್ರತಿ ಬಾರಿ ಯುನಿಟ್ ಗಳು ಬದಲಾಗುವಾಗಲೂ ರಕ್ಷಣಾ ಸಚಿವರಾಗಿದ್ದಷ್ಟು ವರ್ಷವೂ ಆ ಸಮಯಕ್ಕೆ ಜಾರ್ಜ್ ಫರ್ನಾಂಡೀಸ್ ಅಲ್ಲಿ ಹಾಜರಾಗುತ್ತಿದ್ದರು. ಅಷ್ಟೇ ಅಲ್ಲ ಸಿಯಾಚಿನ್ ಗ್ಲೇಸಿಯರ್ ನಲ್ಲಿದ್ದ ಸೈನಿಕರನ್ನು ಆಗಾಗ್ಗೆ  ಭೇಟಿ ಮಾಡಿ ಅಗತ್ಯಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಅತಿ ಹೆಚ್ಚು ಬಾರಿ (18 ಕ್ಕಿಂತ ಹೆಚ್ಚು ಬಾರಿ) ಸಿಯಾಚಿನ್ ಗೆ  ಭೇಟಿ ನೀಡಿ, ಭರವಸೆಗಳನ್ನು ತುಂಬುತ್ತಿದ್ದ ರಕ್ಷಣಾ ಸಚಿವರೆಂಬ ಖ್ಯಾತಿ ಯಾರ ಖಾತೆಯಲ್ಲಾದರೂ ಇದ್ದರೆ ಅದು ಜಾರ್ಜ್ ಅವರದ್ದಾಗಿರದೇ ಮತ್ತೊಬ್ಬರದ್ದಾಗಿರುವುದಕ್ಕೆ ಸಾಧ್ಯವಿಲ್ಲ. 
ಜಾರ್ಜ್ ಅಗಲಿಕೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಡಾ.ಸುಬ್ರಹ್ಮಣಿಯನ್ ಸ್ವಾಮಿ, ಜಾರ್ಜ್ ಅವರ ಸಾಧನೆಗಳನ್ನು ಸ್ಮರಿಸಿದ್ದು, ಭಾರತಕ್ಕೆ ಸಿಕ್ಕಿದ ಅತ್ಯುತ್ತಮ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಎಂದು ಬಣ್ಣಿಸಿದ್ದಾರೆ. ಸಿಯಾಚಿನ್ ನ್ನು ಯೋಧರಿಗೆ ಜೀವಿಸಲು ಸಾಧ್ಯವಾಗಬಲ್ಲ ಪ್ರದೇಶವನ್ನಾಗಿ ಮಾಡಿದ್ದು ಜಾರ್ಜ್ ಫರ್ನಾಂಡೀಸ್, ಜಾರ್ಜ್ ಆಗಾಗ್ಗೆ ಅಲ್ಲಿಗೆ ಭೇಟಿ ನೀಡಿ ಯೋಧರ ಅಗತ್ಯತೆಗಳನ್ನು ತಿಳಿಯುತ್ತಿದ್ದರು. ಜಾರ್ಜ್ ಗೆ ಯೋಧರ ಬಗ್ಗೆ ಇದ್ದಷ್ಟು ಸಹಾನುಭೂತಿ ಬಹುಶಃ ಮತ್ತೊಬ್ಬ ರಕ್ಷಣಾ ಸಚಿವರಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಸ್ವಾಮಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com