ಪಿಯುಬಿಜಿ ಗೇಮ್ ನಿಷೇಧಿಸಲು ಆಗ್ರಹಿಸಿ ಸರ್ಕಾರಕ್ಕೆ 11 ವರ್ಷದ ಬಾಲಕನಿಂದ ಪತ್ರ

ಹಿಂಸಾಚಾರವನ್ನು, ಬೆದರಿಕೆಯನ್ನು ಪ್ರಚೋದಿಸುವ ಪಿಯುಬಿಜಿ ಎಂದೇ ಖ್ಯಾತಿ ಪಡೆದಿರುವ ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ ಗ್ರೌಂಡ್ ಎಂಬ ಆನ್ ಲೈನ್ ಗೇಮ್ ನ್ನು ನಿಷೇಧಿಸಲು ಒತ್ತಾಯಿಸಿ 11 ವರ್ಷದ ಬಾಲಕ
ಪಿಯುಬಿಜಿ ಗೇಮ್ ನಿಷೇಧಿಸಲು ಆಗ್ರಹಿಸಿ ಸರ್ಕಾರಕ್ಕೆ 11 ವರ್ಷದ ಬಾಲಕನಿಂದ ಪತ್ರ
ಪಿಯುಬಿಜಿ ಗೇಮ್ ನಿಷೇಧಿಸಲು ಆಗ್ರಹಿಸಿ ಸರ್ಕಾರಕ್ಕೆ 11 ವರ್ಷದ ಬಾಲಕನಿಂದ ಪತ್ರ
ಮುಂಬೈ: ಹಿಂಸಾಚಾರವನ್ನು, ಬೆದರಿಕೆಯನ್ನು ಪ್ರಚೋದಿಸುವ ಪಿಯುಬಿಜಿ ಎಂದೇ ಖ್ಯಾತಿ ಪಡೆದಿರುವ ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ ಗ್ರೌಂಡ್ ಎಂಬ ಆನ್ ಲೈನ್ ಗೇಮ್ ನ್ನು ನಿಷೇಧಿಸಲು ಒತ್ತಾಯಿಸಿ 11 ವರ್ಷದ ಬಾಲಕ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ. 
ಪೋಷಕರು ತಮ್ಮ ಮಕ್ಕಳ ಗೇಮಿಂಗ್ ಚಟದಿಂದ ಕಂಗಾಲಾಗಿದ್ದು ಕಡಿವಾಣ ಹಾಕಬೇಕೆಂದುಕೊಳ್ಳುತ್ತಿರುವಷ್ಟರಲ್ಲಿ ಮಹಾರಾಷ್ಟ್ರದ 11 ವರ್ಷದ ಬಾಲಾಕ ಅಹಾದ್ ಪರಿಣಾಮಕಾರಿಯಾಗಿ ಗೇಮಿಂಗ್ ವಿರುದ್ಧ ಹೋರಾಡಲು ಮುಂದಾಗಿದ್ದಾನೆ. ಇದರ ಭಾಗವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ, ಕೇಂದ್ರ ಸಚಿವರುಗಳಿಗೆ ಪತ್ರ ಬರೆದಿರುವ ಅಹಾದ್, ಪಿಯುಬಿಜಿ ಎಂಬ ಆನ್ ಲೈನ್ ಗೇಮ್ ಹಿಂಸಾಚಾರ, ಸೈಬರ್ ಬೆದರಿಕೆ, ಕೊಲೆ, ಸುಲಿಗೆ, ಗೇಮಿಂಗ್ ಚಟವನ್ನು ಪ್ರಚೋದಿಸುತ್ತಿದೆ. ಆದ್ದರಿಂದ ಈ ಗೇಮ್ ನ್ನು ನಿಷೇಧಿಸಬೇಕೆಂದು ಮನವಿ ಮಾಡಿದ್ದಾನೆ. 
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೇ, ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೂ ಪತ್ರವನ್ನು ತಲುಪಿಸಿದ್ದು, ಒಂದು ವೇಳೆ ಗೇಮ್ ಗೆ ನಿಷೇಧ ವಿಧಿಸುವುದರಲ್ಲಿ ಸರ್ಕಾರ ವಿಫಲವಾದರೆ ತಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಸರ್ಕಾರದಿಂದ ಈ ವರೆಗೂ ಯಾವುದೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಹಾದ್ ಬಾಂಬೆ ಹೈಕೋರ್ಟ್ ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. 
ಪಿಯುಬಿಜಿ ಗೇಮ್ 2007 ರಿಂದಲೂ ಮೈಕ್ರೋಸಾಫ್ಟ್ ವಿಂಡೋಸ್, ಎಕ್ಸ್ ಬಾಕ್ಸ್ ಒನ್, ಆಂಡ್ರಾಯ್ಡ್, ಪ್ಲೇ ಸ್ಟೇಷನ್ 4 ರಲ್ಲಿ ಲಭ್ಯವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com