ಟೈಮ್ಸ್ ನೌ, ವಿಎಂಆರ್‌ನಿಂದ 'ಲೋಕ' ಚುನಾವಣಾ ಪೂರ್ವ ಸಮೀಕ್ಷೆ; ಮೋದಿಗೆ ಹಿನ್ನಡೆ, ಯಾರಾಗ್ತಾರೆ ಪ್ರಧಾನಿ?

2019ರ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು ಇನ್ನು ಕೆಲವೊಂದು ಮಾಧ್ಯಮಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು ರಾಷ್ಟ್ರೀಯ...
ನರೇಂದ್ರ ಮೋದಿ-ರಾಹುಲ್ ಗಾಂಧಿ
ನರೇಂದ್ರ ಮೋದಿ-ರಾಹುಲ್ ಗಾಂಧಿ
ನವದೆಹಲಿ: 2019ರ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು ಇನ್ನು ಕೆಲವೊಂದು ಮಾಧ್ಯಮಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು ರಾಷ್ಟ್ರೀಯ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಪ್ರಧಾನಿ ಮೋದಿಗೆ ಪ್ರಾದೇಶಿಕ ಪಕ್ಷಗಳು ದೊಡ್ಡ ಪೈಪೋಟಿ ನೀಡಲಿವೆ.
ಸದ್ಯ ವಿಎಂಆರ್ ಮತ್ತು ಟೈಮ್ಸ್ ನೌ ಸೇರಿ ರಾಜ್ಯವಾರು ನಡೆಸಿರುವ ಈ ಸಮೀಕ್ಷೆ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿವೆ ಎಂಬುದನ್ನು ತಿಳಿಸಿದೆ. 
ರಾಜ್ಯಗಳ ಸಮೀಕ್ಷಾ ವಿವರ ಹೀಗಿದೆ:
ಕರ್ನಾಟಕ: 28 ಕ್ಷೇತ್ರಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 14 ಸ್ಥಾನ ಗೆಲ್ಲಲಿದೆ. 
ಆಂಧ್ರಪ್ರದೇಶ: 25 ಕ್ಷೇತ್ರಗಳ ಪೈಕಿ ವೈಆರ್ಎಸ್ ಕಾಂಗ್ರೆಸ್ 23, ಟಿಡಿಪಿಗೆ 2 ಸ್ಥಾನ.
ತಮಿಳುನಾಡು: 39 ಕ್ಷೇತ್ರಗಳ ಪೈಕಿ ಯುಪಿಎ ಡಿಎಂಕೆ 35, ಎಐಎಡಿಎಂಕೆ 4 
ಕೇರಳ: 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 16
ತೆಲಂಗಾಣ: 17 ಕ್ಷೇತ್ರಗಳ ಪೈಕಿ ಟಿಆರ್ಎಸ್ 10, ಕಾಂಗ್ರೆಸ್ 5 ಹಾಗೂ ಬಿಜೆಪಿ 1 ಸ್ಥಾನ.
ಪಾಂಡಿಚೇರಿ: 1 ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು.
ಅಂಡಮಾನ್: 1 ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಬಿಹಾರ: 40 ಕ್ಷೇತ್ರಗಳ ಪೈಕಿ ಎನ್ಡಿಎ 25, ಯುಪಿಎ 15 ಕ್ಷೇತ್ರ.
ಪಶ್ಚಿಮ ಬಂಗಾಳ: 42 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ 32, ಬಿಜೆಪಿ 9 ಹಾಗೂ ಇತರೆ 1 ಸ್ಥಾನ.
ಜಾರ್ಖಂಡ್: 14 ಕ್ಷೇತ್ರ- ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರ. 
ಒಡಿಶಾ: 21 ಕ್ಷೇತ್ರಗಳಲ್ಲಿ ಬಿಜೆಪಿ 13, ಬಿಜೆಪಿ 8 ಕ್ಷೇತ್ರ.
ಅಸ್ಸಾಂ: 14 ಕ್ಷೇತ್ರಗಳಲ್ಲಿ ಬಿಜೆಪಿ 8, ಕಾಂಗ್ರೆಸ್ 3 ಹಾಗೂ ಇತರರು 3 ಕ್ಷೇತ್ರ.
ನಾರ್ಥ್ ಈಸ್ಟ್: 11 ಕ್ಷೇತ್ರದಲ್ಲಿ ಬಿಜೆಪಿ 9 ಸ್ಥಾನ. ಇತರರು 2 ಸ್ಥಾನ. 
ಮಹಾರಾಷ್ಟ್ರ: 48 ಕ್ಷೇತ್ರಗಳಲ್ಲಿ ಎನ್ಡಿಎ 43 ಕ್ಷೇತ್ರ. ಯುಪಿಎ 5 ಕ್ಷೇತ್ರ.
ಗುಜರಾತ್: 26 ಕ್ಷೇತ್ರಗಳಲ್ಲಿ ಬಿಜೆಪಿ 24 ಹಾಗೂ ಕಾಂಗ್ರೆಸ್ 2 ಕ್ಷೇತ್ರ.
ಗೋವಾ: 2 ಕ್ಷೇತ್ರಗಳಲ್ಲಿ ಬಿಜೆಪಿ 1, ಕಾಂಗ್ರೆಸ್ 1 ಕ್ಷೇತ್ರ.
ದಮನ್ ಮತ್ತು ಡಿಯು: 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಉತ್ತರಪ್ರದೇಶ: 80 ಕ್ಷೇತ್ರಗಳ ಪೈಕಿ ಎನ್ಡಿಎ 27, ಎಸ್ಬಿ-ಬಿಎಸ್ಪಿ 51 ಹಾಗೂ ಕಾಂಗ್ರೆಸ್ 2 ಕ್ಷೇತ್ರ.
ದಾದ್ರಾ ನಗರ ಹವೆಲಿ: 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಮಧ್ಯಪ್ರದೇಶ: 29 ಕ್ಷೇತ್ರಗಳ ಪೈಕಿ ಬಿಜೆಪಿ 23 ಹಾಗೂ ಕಾಂಗ್ರೆಸ್ 6 ಕ್ಷೇತ್ರ.
ರಾಜಸ್ಥಾನ: 25 ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 8 ಕ್ಷೇತ್ರ.
ಛತ್ತೀಸ್ ಗಢ: 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6, ಬಿಜೆಪಿ 5 ಕ್ಷೇತ್ರ.
ಒಟ್ಟಾರೆ 543 ಕ್ಷೇತ್ರಗಳ ಪೈಕಿ ಎನ್ಡಿಎ 252, ಯುಪಿಎ 147 ಹಾಗೂ ಇತರರು 144 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಲಿರುವ ಪ್ರಧಾನಿ ನೇತೃತ್ವದ ಎನ್ಡಿಎ ಸರ್ಕಾರ ರಚನೆ ಮಾಡುತ್ತಾ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com