ನವದೆಹಲಿ: 2018-19ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ಮಂಡಿಸಿದರು.
ಸಮಗ್ರ ಮತ್ತು ನಿರೀಕ್ಷಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ದೇಶದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ಆರ್ಥಿಕ ಸಮೀಕ್ಷೆ ಸಲಹೆ ಮಾಡಿದೆ.
ಕನಿಷ್ಠ ವೇತನವನ್ನು ಮರುರೂಪಿಸಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ವೇತನ ಅಸಮಾನತೆ ಕಡಿಮೆ ಮಾಡಲು ಸಹಾಯವಾಗಲಿದೆ ಎಂದೂ ಸಮೀಕ್ಷೆ ಹೇಳಿದೆ.
ಕನಿಷ್ಠ ವೇತನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ವೇತನ ಅಸಮಾನತೆ, ವಿಶೇಷವಾಗಿ ಕೆಳಮಟ್ಟದಲ್ಲಿ ಕಡಿಮೆಯಾಗಿ ವ್ಯವಸ್ಥೆ ಮೇಲಿನ ನಂಬಿಕೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ವೇತನ ವಿತರಣೆಯ ಕೆಳಹಂತದಲ್ಲಿ ಬಹುಪಾಲು ಮಹಿಳೆಯರೇ ಇರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ವೇತನ ವಿಧೇಯಕದಡಿ ಪ್ರಸ್ತಾಪಿಸಿರುವಂತೆ ಕನಿಷ್ಠ ವೇತನದ ಅಗತ್ಯತೆಯನ್ನು ಬೆಂಬಲಿಸಬೇಕಿದೆ ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ.