ಜೈ ಶ್ರೀರಾಮ್ ಪಠಿಸಿ ಎಂದು ಯುವಕರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ದೂರು ದಾಖಲು

ಯುವಕರ ಗುಂಪೊಂದು ಮೂವರ ಬಳಿ ಬಂದು ಜೈ ಶ್ರೀರಾಮ್ ಎಂದು ಪಠಿಸಿ ಎಂದು ಹೇಳಿದಾಗ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ರಾಂಚಿ/ಗುವಾಹಟಿ: ಯುವಕರ ಗುಂಪೊಂದು ಮೂವರ ಬಳಿ ಬಂದು ಜೈ ಶ್ರೀರಾಮ್ ಎಂದು ಪಠಿಸಿ ಎಂದು ಹೇಳಿದಾಗ ನಿರಾಕರಿಸಿದ್ದಕ್ಕೆ ಅವರಿಗೆ ಥಳಿಸಿದ ಘಟನೆ ರಾಂಚಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಈ ಸಂಬಂಧ ಯುವಕರು ಪೊಲೀಸರಿಗೆ ದೂರು ನೀಡಿದ್ದು, ಫೋಟೋ ತೆಗೆಯಲು ಹೆತು ಗ್ರಾಮದಲ್ಲಿ ವಿಮಾನ ನಿಲ್ದಾಣ ರಸ್ತೆ ಬಳಿ ಹೋಗಿದ್ದಾಗ 25ರಿಂದ 30 ಜನರ ಗುಂಪೊಂದು ತಮ್ಮ ಬಳಿ ಬಂದು ತಮ್ಮ ಹೆಸರು ಕೇಳಿ ನಂತರ ಧರ್ಮದ ಹೆಸರಿನಲ್ಲಿ ನಮ್ಮನ್ನು ನಿಂದಿಸಲು ಆರಂಭಿಸಿದರು ಎಂದು ಹೇಳಿದ್ದಾರೆ.
ನಮ್ಮ ಮೇಲೆ ಕೋಲು ಮತ್ತು ರಾಡ್ ನಿಂದ ಹೊಡೆದು ಅವರ ಬಟ್ಟೆಗಳನ್ನು ಹರಿದು ಜೈ ಶ್ರೀರಾಮ್ ಎಂದು ಪಠಿಸುವಂತೆ ಒತ್ತಾಯಿಸಿದರು. ಭೀತಿಯಿಂದ ತಪ್ಪಿಸಿಕೊಂಡು ಹೋದ ನಾವು ಜೀವ ಕಾಪಾಡಲು ಹತ್ತಿರದ ಸೇನಾ ಶಿಬಿರದಲ್ಲಿ ಹೋಗಿ ಅಡವಿ ಕುಳಿತುಕೊಂಡೆವು. ತಕ್ಷಣವೇ ಪೊಲೀಸರನ್ನು ಕರೆದು ದುಷ್ಕರ್ಮಿಗಳಿಂದ ಜೀವ ಕಾಪಾಡಿಕೊಂಡೆವು ಎನ್ನುತ್ತಾರೆ ದಾಳಿಗೀಡಾದ ಅಮಿರ್ ವಾಸಿಮ್.
ಇಷ್ಟಕ್ಕೇ ಸುಮ್ಮನಾಗದ ಗುಂಪು ನಗರದ ಎಂಜಿ ಮಾರ್ಗ್ ವನ್ನು ತಡೆದು ಸಂಜೆ ವೇಳೆಗೆ ಮುಖ್ಯ ರಸ್ತೆಯನ್ನು ಕೂಡ ಬಂದ್ ಮಾಡಿದರು, ಆಗ ಪೊಲೀಸರು ಬಂದು ತಡೆಯನ್ನು ನಿವಾರಿಸಿ ಜನರ ಓಡಾಟಕ್ಕೆ ಹಾದಿ ಮಾಡಿಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com