ಬುದ್ಧಿವಂತ ರಾಹುಲ್ ನಿರ್ಧಾರ ಗೌರವಿಸಿ, ರಾಜೀನಾಮೆ ಅಂಗೀಕರಿಸಿ: ಕರಣ್ ಸಿಂಗ್

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರವೂ ಹೊಸ ಅಧ್ಯಕ್ಷರ ನೇಮಕಗೊಳಿಸದ ಪಕ್ಷದ ಕಾರ್ಯಕಾರಿಣಿ ಸಮಿತಿ ವಿರುದ್ಧ...
ಕರಣ್ ಸಿಂಗ್
ಕರಣ್ ಸಿಂಗ್
ನವದೆಹಲಿ: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರವೂ ಹೊಸ ಅಧ್ಯಕ್ಷರ ನೇಮಕಗೊಳಿಸದ ಪಕ್ಷದ ಕಾರ್ಯಕಾರಿಣಿ ಸಮಿತಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಅವರು, ಬುದ್ಧಿವಂತ ರಾಹುಲ್ ನಿರ್ಧಾರ ಗೌರವಿಸಿ, ರಾಜೀನಾಮೆ ಅಂಗೀಕರಿಸಿ ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ರಾಜೀನಾಮೆಯ ಬೆನ್ನಲ್ಲೇ ದೇಶಾದ್ಯಂತ ಇತರ ಕಾಂಗ್ರೆಸ್ ನಾಯಕರ ರಾಜೀನಾಮೆ ಪರ್ವ ಮುಂದುವರಿದಿರುವುಕ್ಕೆ ಬೇಸರ ವ್ಯಕ್ತಪಡಿಸಿರುವ ಕರಣ್ ಸಿಂಗ್, ಕಾರ್ಯಕಾರಿಣಿ ಸಮಿತಿ ಪರಿಸ್ಥಿತಿಯನ್ನು ಅರಿತು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೂ ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಪಕ್ಷದ ನಾಯಕರಿಗೆ ಪತ್ರ ಬರೆದಿರುವ ಕರಣ್ ಸಿಂಗ್, ರಾಹುಲ್ ಗಾಂಧಿ ಅವರ ರಾಜೀನಾಮೆಯ ನಂತರ ಪಕ್ಷದಲ್ಲಿ ಉಂಟಾಗುವ ಗೊಂದಲಗಳಿಂದ ತಾವು ಆತಂಕಗೊಂಡಿರುವುದಾಗಿ ತಿಳಿಸಿದ್ದಾರೆ. 
ಒಂದು ತಿಂಗಳ ಸಮಯ ಹಾಳು ಮಾಡುವ ಬದಲು ಕೂಡಲೇ ರಾಹುಲ್ ರಾಜೀನಾಮೆ ಅಂಗೀಕರಿಸಿ, ಪಕ್ಷಕ್ಕೆ ಮಧ್ಯಂತರ ಅಧ್ಯಕ್ಷರನ್ನು ನೇಮಿಸಬೇಕಿತ್ತು ಕರಣ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡಲೇ ಸಭೆ ಸೇರಿ, ನೂತನ ಅಧ್ಯಕ್ಷ ಹಾಗೂ ನಾಲ್ವರು ಉಪಾಧ್ಯಕ್ಷರನ್ನು ನೇಮಿಸಬೇಕು ಎಂದು ಕರಣ್ ಸಿಂಗ್ ಆಗ್ರಹಿಸಿದ್ದಾರೆ.
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಕ್ಕೆ ಒಬ್ಬೊಬ್ಬರಂತೆ ನಾಲ್ವರು ಉಪಾಧ್ಯಕ್ಷರನ್ನು ನೇಮಿಸಿ, ಕೇಂದ್ರದಲ್ಲಿ ಓರ್ವ ಅಧ್ಯಕ್ಷರನ್ನು ನೇಮಿಸುವುದು ಉತ್ತಮ ಎಂದು ಕರಣ್ ಸಿಂಗ್ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com