ಪ್ರತಿಭಟನೆ
ದೇಶ
ತಿವಾರೆ ಅಣೆಕಟ್ಟು ಬಗ್ಗೆ ಅಸಂಬದ್ಧ ಹೇಳಿಕೆ: ಮಹಾರಾಷ್ಟ್ರ ಸಚಿವರ ನಿವಾಸದ ಹೊರಗಡೆ ಏಡಿ ಸುರಿದು ಪ್ರತಿಭಟನೆ
ತ್ನ ಗಿರಿ ಜಿಲ್ಲೆಯ ತಿವಾರೆ ಅಣೆಕಟ್ಟು ಒಡೆಯಲು ಏಡಿಗಳೇ ಕಾರಣ ಎಂದು ಅಸಂಬದ್ಧ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಜಲ ಸಂರಕ್ಷಣಾ ಸಚಿವ ತಾನಾಜಿ ಸವಾಂತ್ ಮನೆಯ ಹೊರಗಡೆ ಏಡಿಗಳನ್ನು ಸುರಿದು ಎನ್ ಸಿಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಮುಂಬೈ: ರತ್ನ ಗಿರಿ ಜಿಲ್ಲೆಯ ತಿವಾರೆ ಅಣೆಕಟ್ಟು ಒಡೆಯಲು ಏಡಿಗಳೇ ಕಾರಣ ಎಂದು ಅಸಂಬದ್ಧ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಜಲ ಸಂರಕ್ಷಣಾ ಸಚಿವ ತಾನಾಜಿ ಸವಾಂತ್ ಮನೆಯ ಹೊರಗಡೆ ಏಡಿಗಳನ್ನು ಸುರಿದು ಎನ್ ಸಿಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.
ನಂತರ ಈ ಏಡಿಗಳನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡ ಹೋದ ಎನ್ ಸಿಪಿ ಮಹಿಳಾ ವಿಭಾಗದ ಕಾರ್ಯಕರ್ತರು, ಸಚಿವರ ಮನೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದ ಏಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ತಿವಾರೆ ಜಲಾಶಯ ಒಡೆದು 20 ಜನರು ಮೃತಪಟ್ಟಿದ್ದರು. ಈ ಸಂಬಂಧ ಹೇಳಿಕೆ ನೀಡಿದ್ದ ಸಚಿವ ತಾನಾಜಿ ಸವಾಂತ್, ಜಲಾಶಯದಿಂದ ಈ ಹಿಂದೆ ಯಾವಾಗಲೂ ಸೋರಿಕೆ ಕಂಡುಬಂದಿರಲಿಲ್ಲ. ಅಣೆಕಟ್ಟಿನಲ್ಲಿ ಅಪಾರ ಪ್ರಮಾಣದ ಏಡಿಗಳು ಕಂಡುಬಂದ ನಂತರ ಸೋರಿಕೆಯಾಗಿದೆ. ಈ ಬಗ್ಗೆ ಸ್ಥಳೀಯರು ನೀಡಿರುವ ದೂರು ತಮ್ಮ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ. ಈ ಘಟನೆ ದುರದೃಷ್ಟಕರ ಎಂದಿದ್ದರು.
ಕಳೆದ ವಾರ ಎನ್ ಸಿಪಿ ಮುಖಂಡ ಜೀತೇಂದ್ರ ಅವಾಡೆ ನೌಪಾದಾ ಠಾಣೆ ಮುಂಭಾಗ ಏಡಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಧಾರಾಕಾರ ಮಳೆಯಿಂದಾಗಿ ಜುಲೈ 3 ರಂದು ತಿವಾರೆ ಜಲಾಶಯ ಒಡೆದಿತ್ತು. ಇದರಿಂದಾಗಿ ಏಳು ಹಳ್ಳಿಗಳು ಜಲಾವೃತಗೊಂಡು,ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ