ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋ ಕಂಡು ಬೆಚ್ಚಿಬಿದ್ದ ಗಂಡ!

ತನ್ನ ಮನೆಯ ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ ವ್ಯಕ್ತಿಯೊರ್ವನಿಗೆ ಅದರಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋವನ್ನು ನೋಡಿ ದಂಗಾಗಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತನ್ನ ಮನೆಯ ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ ವ್ಯಕ್ತಿಯೊರ್ವನಿಗೆ ಅದರಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋವನ್ನು ನೋಡಿ ದಂಗಾಗಿದ್ದಾನೆ. 
ಎಂದಿನಂತೆ ಮನೆಯಲ್ಲಿ ಮಹೇಶ್ ಎಂಬಾತ ಆನ್ ಲೈನ್ ವೆಬ್ ಸೈಟ್ ಮೂಲಕ ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ. ಒಂದೊಂದೆ ವಿಡಿಯೋಗಳನ್ನು ನೋಡುತ್ತಿದ್ದ ಮಹೇಶ್ ತನ್ನ ಪತ್ನಿ ಜೊತೆಗೆ ನಡೆಸಿದ್ದ ಸೆಕ್ಸ್ ವಿಡಿಯೋವೊಂದು ಪ್ರಸಾರವಾಗಿದೆ. ಇದರಿಂದ ಹೌಹಾರಿದ ಆತ ತಾನು ಯಾವುದೇ ರೀತಿಯಲ್ಲೂ ಹೆಂಡತಿ ಜೊತೆಗಿನ ರಾಸಲೀಲೆ ಕ್ಷಣಗಳನ್ನು ಮೊಬೈಲ್ ಅಥವಾ ಕ್ಯಾಮೆರಾ ಇಟ್ಟು ಸೆರೆ ಹಿಡಿದಿರಲಿಲ್ಲ. ಆದರೂ ತನ್ನ ಬೆಡ್ ರೂಂನಲ್ಲಿ ನಡೆದಿದ್ದ ರಾಸಲೀಲೆಯನ್ನು ಹೇಗೆ ವಿಡಿಯೋ ಮಾಡಲಾಗಿದೆ ಎಂದು ಚಿಂತಕ್ರಾಂತನಾಗಿದ್ದಾನೆ. 
ಪೊಲೀಸರಿಗೆ ದೂರು ಕೊಟ್ಟರೇ ಅವಮಾನವಾಗುತ್ತದೆ ಎಂದು ಮಹೇಶ್ ಸೈಬರ್ ಸೆಕ್ಯೂರಿಟಿ ಹಾಗೂ ಸೈಬರ್ ಅಪರಾಧಗಳ ಕುರಿತು ಜ್ಞಾನವಿರುವ ತಜ್ಞರನ್ನು ಸಂಪರ್ಕಿಸಿದ್ದಾನೆ. ಅವರು ಮನೆಯಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಟ್ಟಿದ್ದಾರೋ ಎಂದು ಪರಿಶೀಲಿಸಿದ್ದಾರೆ. ಆಗ ಅವರಿಗೆ ಹಿಡನ್ ಕ್ಯಾಮೆರಾ ಪತ್ತೆಯಾಗಿರಲಿಲ್ಲ. 
ಇದರಿಂದ ಯೋಚನೆಗೆ ಗುರಿಯಾದ ತಜ್ಞರು ನಂತರ ಸ್ಮಾರ್ಟ್ ಟಿವಿಯನ್ನು ಪರಿಶೀಲಿಸಿದಾಗ ಟಿವಿಯನ್ನು ಹ್ಯಾಕ್ ಮಾಡಿದ ವಿಚಾರ ಗೊತ್ತಾಗಿದೆ. ಮಹೇಶ್ ಪೋರ್ಸ್ ತಾಣಗಳಿಗೆ ಭೇಟಿ ನೀಡುತ್ತಿದ್ದ ವಿಚಾರ ಗೊತ್ತಿದ್ದ ಹ್ಯಾರ್ಕರ್ಸ್ ಗಳು ಟಿವಿಯನ್ನು ಹ್ಯಾಕ್ ಮಾಡಿ ಟಿವಿಯಲ್ಲಿರುವ ಬಿಲ್ಟ್ ಇನ್ ಕ್ಯಾಮೆರಾವನ್ನು ನಿಯಂತ್ರಿಸತೊಡಗಿದ್ದಾರೆ. ಈ ಮೂಲಕ ಮಹೇಶ್ ಅವರ ರಾಸಲೀಲೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ಶ್ರಮಪಟ್ಟು ಮಹೇಶ್ ತನ್ನ ಪೋರ್ನ್ ವಿಡಿಯೋವನ್ನು ತೆಗೆಸಿದ್ದಾನೆ. ಆದರೆ ಅದಾಗಲೇ ಹಲವು ಆನ್ ಲೈನ್ ವೆಬ್ ಸೈಟ್ ಗಳಲ್ಲಿ ವಿಡಿಯೋ ಅಪ್ಲೋಡ್ ಆಗಿದೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com