ಅಲ್ ಖೈದಾ ಬೆದರಿಕೆ ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ: ವಿದೇಶಾಂಗ ಸಚಿವಾಲಯ

ಉಗ್ರ ಸಂಘಟನೆಗಳ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ದೇಶದ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡಲು ನಮ್ಮ ಸೇನೆ ಸಮರ್ಥವಾಗಿದೆ...
ರವೀಶ್ ಕುಮಾರ್
ರವೀಶ್ ಕುಮಾರ್
ನವದೆಹಲಿ: ಉಗ್ರ ಸಂಘಟನೆಗಳ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ದೇಶದ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಭಾರತ ತಿಳಿಸಿದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ಈ ಉತ್ತರ ನೀಡಿದ್ದಾರೆ.
ಈ ಹಿಂದೆಯೂ ಉಗ್ರ ಸಂಘಟನೆಗಳು ನಮ್ಮ ದೇಶಕ್ಕೆ ಇಂತಹ ಬೆದರಿಕೆಗಳನ್ನು ಒಡ್ಡಿವೆ . ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆದಾಗ್ಯೂ ನಮ್ಮ ದೇಶದ ಸಾರ್ವಭೌಮತ್ವ, ಸಮಗ್ರತೆ ಕಾಪಾಡುವಲ್ಲಿ ಸೇನೆ ಸಮರ್ಥವಾಗಿದೆ. ಅಗತ್ಯ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com